More

    ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

    ದಾವಣಗೆರೆ : ಹೊಸ ವರ್ಷ 2023ರ ಸ್ವಾಗತಕ್ಕೆ ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಸಂಭ್ರಮಾಚರಣೆ ಜೋರಾಗಿತ್ತು.
    ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕೋವಿಡ್ ಆತಂಕ ಅಷ್ಟಾಗಿ ಇಲ್ಲದ ಕಾರಣ ಜನರು ನೂತನ ವರ್ಷವನ್ನು ಸಂಭ್ರಮದಿಂದಲೇ ಸ್ವಾಗತಿಸಿದರು. ಪರಸ್ಪರ ಶುಭಾಶಯಗಳ ವಿನಿಮಯ ಮಾಡಿಕೊಳ್ಳುವುದು ಕಂಡುಬಂದಿತು.
    ಬೇಕರಿಗಳಲ್ಲಿ ಕೇಕ್‌ಗಳ ಮಾರಾಟ ಭರ್ಜರಿಯಾಗಿತ್ತು. ಸಾರ್ವಜನಿಕರು ಸಂಜೆಯಿಂದಲೇ ಖರೀದಿಗಾಗಿ ಮುಗಿಬಿದ್ದರು. ಅರ್ಧ ಕೆಜಿಯಿಂದ ಹಿಡಿದು 2 ಕೆಜಿ ವರೆಗಿನ ತೂಕದ ತರಹೇವಾರಿ ಕೇಕ್‌ಗಳು ಮಾರಾಟವಾದವು.
    ನಗರದಲ್ಲಿ 400ಕ್ಕೂ ಹೆಚ್ಚು ಬೇಕರಿಗಳಿದ್ದು ಅವು ಕೇಕ್‌ಗಳಿಂದ ತುಂಬಿ ತುಳುಕುತ್ತಿದ್ದವು. ಅಂಗಡಿಯ ಮುಂಭಾಗದಲ್ಲಿ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಾಮಾನ್ಯ ದಿನಗಳಿಗಿಂತ ಎರಡರಿಂದ ಮೂರು ಪಟ್ಟು ಜಾಸ್ತಿ ವ್ಯಾಪಾರವಾಯಿತು. ಒಂದು ಅಂದಾಜಿನ ಪ್ರಕಾರ 50 ಲಕ್ಷ ರೂ.ಗಳಿಗೂ ಹೆಚ್ಚು ವಹಿವಾಟು ನಡೆಯಿತು.
    ಸಾರ್ವಜನಿಕರು ತಮ್ಮಿಷ್ಟದ ಫ್ಲೇವರ್, ವಿನ್ಯಾಸ ಹಾಗೂ ಬಣ್ಣದ ಕೇಕ್‌ಗಳನ್ನು ಬಾಕ್ಸ್‌ಗಳಲ್ಲಿ ತೆಗೆದುಕೊಂಡು ಹೋದರು. ಜತೆಗೆ ತಂಪು ಪಾನೀಯಕ್ಕೂ ಬೇಡಿಕೆಯಿತ್ತು. ಗ್ರಾಹಕರ ಸಂಖ್ಯೆ ಜಾಸ್ತಿ ಇದ್ದ ಕಾರಣ ಬೇಕರಿ ಸಿಬ್ಬಂದಿ ಬಿಡುವಿಲ್ಲದಂತೆ ಕೆಲಸ ಮಾಡಬೇಕಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts