More

    ಮಾಡಾಳು ಗ್ರಾಮದಲ್ಲಿ ಶೋಧ ಕಾರ್ಯಾಚರಣೆ

    ದಾವಣಗೆರೆ : ಟೆಂಡರ್ ನೀಡಲು ಲಂಚ ಸ್ವೀಕರಿಸಿದ ಪ್ರಕರಣ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಚನ್ನಗಿರಿ ತಾಲೂಕಿನ 3 ಕಡೆ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿ 16.47 ಲಕ್ಷ ರೂ. ನಗದು, ಒಡವೆ ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡರು.
     ಎಸ್ಪಿ ಎಂ.ಎಸ್. ಕೋಲಾಪುರೆ ನೇತೃತ್ವದಲ್ಲಿ ಒಬ್ಬರು ಡಿವೈಎಸ್ಪಿ, 5 ಜನ ಇನ್ಸ್‌ಪೆಕ್ಟರ್‌ಗಳು ಸೇರಿ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ 15ಕ್ಕೂ ಹೆಚ್ಚು ಸಿಬ್ಬಂದಿ ಬೆಳಗ್ಗೆ ಮಾಡಾಳು ಗ್ರಾಮದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.
     ಗ್ರಾಮದ ತೋಟದ ಮನೆ, ಮಾವಿನಹೊಳೆ ಬಳಿಯ ಕ್ರಷರ್ ಕಚೇರಿಯಲ್ಲೂ ತಪಾಸಣೆ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡರು.
     ಬೆಳಗ್ಗೆ 11 ಗಂಟೆಗೆ 3 ವಾಹನಗಳಲ್ಲಿ ಅಧಿಕಾರಿಗಳು ಬಂದಿಳಿದಾಗ ಮನೆಯಲ್ಲಿ ಶಾಸಕ ಮಾಡಾಳು ಮತ್ತು ಅವರ ಪುತ್ರರು ಇರಲಿಲ್ಲ. ಕುಟುಂಬದ ಇತರ ಸದಸ್ಯರು ಮಾತ್ರ ಇದ್ದರು. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನರು ಮತ್ತು ಪಕ್ಷದ ಕಾರ್ಯಕರ್ತರು ಮನೆಯ ಮುಂದೆ ಜಮಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts