More

    5 ವರ್ಷಗಳಲ್ಲಿ 500 ಕೋಟಿ ಠೇವಣಿ ಗುರಿ

    ದಾವಣಗೆರೆ : ಜಿ.ಎಂ. ಸೌಹಾರ್ದ ಪತ್ತಿನ ಸಹಕಾರಿ ಸಂಘವು ಮುಂಬರುವ 5 ವರ್ಷಗಳಲ್ಲಿ 500 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್ ಹೇಳಿದರು.
     ನಗರದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
     2022-23ನೇ ಸಾಲಿನ ಅಂತ್ಯಕ್ಕೆ ನಮ್ಮ ಸಹಕಾರಿಯು 202.74 ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿದ್ದು, 173.32 ಕೋಟಿ ರೂ.ಗಳ ಸಾಲ ವಿತರಿಸಿದ್ದೇವೆ. 3.6 ಕೋಟಿ ರೂ. ಲಾಭ ಗಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
     ಎಲ್ಲ ಸದಸ್ಯರ ಸಹಕಾರದಿಂದ ಈ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಸಹಕಾರ ಸಂಘದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಪೂರ್ವಕ ನಡೆ ಮುಖ್ಯ ಕಾರಣ ಎಂದು ಸ್ಮರಿಸಿದರು.
     ಕೋವಿಡ್ ಸಂದರ್ಭದಲ್ಲಿ ಶೇ. 12 ಡಿವಿಡೆಂಡ್ ವಿತರಣೆ ಮಾಡಿ ಸದಸ್ಯರ ಹಿತರಕ್ಷಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಹಕಾರಿಯ ಕೇಂದ್ರಕ್ಕೆ ಪಿ.ಬಿ. ರಸ್ತೆಯಲ್ಲಿ ಒಂದು ಯೋಗ್ಯ ನಿವೇಶನ ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವ ಸುಳಿವು ನೀಡಿದರು.
     ಸಂಘದ ಉಪಾಧ್ಯಕ್ಷ ಪ್ರಭುದೇವ್ ಮಾತನಾಡಿ, ಸಂಘದ ಮುಂದಿನ ನಡೆಯ ಬಗ್ಗೆ ಸ್ಥೂಲ ಪರಿಚಯ ಒದಗಿಸಿದರು. ಹಿರಿಯ ನಿರ್ದೇಶಕರಾದ ಜಿ.ಆರ್.ನೀಲಕಂಠಪ್ಪ, ಎ.ಎಸ್.ಗುರುಮೂರ್ತಿ, ಟಿ.ಅರುಣಕುಮಾರ್, ಕೆ.ಎಸ್.ವಿಜಯಕುಮಾರ್, ಎ.ಸಿ.ಬಸವರಾಜ್, ಶರತ್ ಪಾಟೇಲ್, ಬಿ.ಎಸ್.ರವೀಂದ್ರ, ಎ.ಬಿ.ಸಿದ್ದನಗೌಡ, ಮಹಿಳಾ ನಿದೇರ್ಶಕರಾದ ವೈ.ಎಸ್.ಗಾಯತ್ರಿ ಸುಭಾಷ್‌ಚಂದ್ರ, ಪ್ರಮಿಳಾ ನಟರಾಜ್, ಪ್ರಧಾನ ವ್ಯವಸ್ಥಾಪಕ ಎಸ್.ಎನ್. ಮಲ್ಲಪ್ಪ, ವಿಶೇಷ ಸಲಹೆಗಾರ ಎಸ್.ಸಿ.ಮಹಾರುದ್ರಪ್ಪ ಸೇರಿ ಎಲ್ಲ ಸದಸ್ಯರು, ಸಿಬ್ಬಂದಿ ವರ್ಗದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts