More

    ಎಸ್.ಎಸ್. ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯಾಗಾರ

    ದಾವಣಗೆರೆ : ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ ತರಬೇತಿ ಕಾರ್ಯಾಗಾರವನ್ನು ನಗರದ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
     ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್. ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಯೋಗಾಲಯಗಳಲ್ಲಿ ರೋಗ ಪತ್ತೆ ಹಚ್ಚುವ ಪರೀಕ್ಷೆಗಳ ಗುಣಮಟ್ಟವನ್ನು ಉತ್ತಮಗೊಳಿಸಿ, ರೋಗಿಗಳ ಚಿಕಿತ್ಸೆಗೆ ನೆರವಾಗಲು ಈ ಕಾರ್ಯಾಗಾರ ಮುಖ್ಯವಾಗಿದೆ. ಇದರಲ್ಲಿ ತರಬೇತುದಾರರಾಗಿ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಡಾ.ಕರುಣಾ ರಮೇಶ್ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
     ಎಸ್.ಎಸ್. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಅರುಣ್ ಕುಮಾರ್ ಅಜ್ಜಪ್ಪ ಮಾತನಾಡಿ, ಗುಣಮಟ್ಟದ ಚಿಕಿತ್ಸೆಗೆ ಪ್ರಯೋಗಾಲಯಗಳ ಅವಶ್ಯಕತೆಯನ್ನು ತಿಳಿಸಿದರು.
     ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ಶಶಿಕಲಾ ಪಿ, ಸಹ ಪ್ರಾಧ್ಯಾಪಕರಾದ ಡಾ.ಬಾಲಾಜಿ ಮತ್ತು ಡಾ.ಮೀನಾಕ್ಷಿ ಕಾರ್ಯ ನಿರ್ವಹಿಸಿದರು. ಒಟ್ಟು 25 ಜನ ವೈದ್ಯರು, 5 ಜನ ಪ್ರಯೋಗ ತಂತ್ರಜ್ಞರು ತರಬೇತಿಯಲ್ಲಿ ಭಾಗವಹಿಸಿದ್ದರು.
     ಪೆಥಾಲಜಿ, ಮೈಕ್ರೋಬಯಾಲಜಿ ಹಾಗೂ ಬಯೋಕೆಮಿಸ್ಟ್ರಿಯ ವೈದ್ಯರು, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಸಿ.ಆರ್, ಡಾ.ಜಯಸಿಂಹ ವಿ.ಎಲ್ ಇದ್ದರು. ಡಾ.ಯೋಗೇಶ್ ಬಾಬು ಪ್ರಾರ್ಥಿಸಿದರು.ಡಾ.ಬಾಲಾಜಿ ಸ್ವಾಗತಿಸಿದರು. ಡಾ.ಮೀನಾಕ್ಷಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts