More

    ಶ್ರೀರಾಮ ಸರ್ವ ಜನರ ಸ್ವತ್ತು

    ದಾವಣಗೆರೆ: ಶ್ರೀರಾಮ ಇಡೀ ದೇಶದ ಜನರ ಸ್ವತ್ತು. ಕೇವಲ ಬಿಜೆಪಿಯವರಿಗೆ ಸೀಮಿತ ವ್ಯಕ್ತಿಯಲ್ಲ ಎಂದು ಕಾಂಗ್ರೆಸ್‌ನ ಎಸ್‌ಟಿ ಘಟಕದ ಜಿಲ್ಲಾಧ್ಯಕ್ಷ, ಜಿಪಂ ಸದಸ್ಯ ಕೆ.ಎಚ್.ಓಬಳಪ್ಪ ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಹಾಗೂ ಮಾಜಿ ಉಪಪ್ರಧಾನಿ ವಲ್ಲಭಭಾಯಿ ಪಟೇಲ್ ಅವರ ಜಯಂತ್ಯುತ್ಸವ ಹಾಗೂ ದಿ.ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಬಿಜೆಪಿಯವರು ‘ನಮ್ಮ ರಾಮ’ ಎನ್ನುತ್ತಾರೆ. ಶ್ರೀರಾಮ ಯಾವುದೇ ಜಾತಿ-ಧರ್ಮಕ್ಕಾಗಿ ಕೆಲಸ ಮಾಡಲಿಲ್ಲ. ಬಿಜೆಪಿಯವರು ನಿಜವಾದ ರಾಮಭಕ್ತರಾಗಿದ್ದಲ್ಲಿ ಅಯೋಧ್ಯೆಯಲ್ಲಿ ಭವ್ಯ ಪ್ರತಿಮೆ ಸ್ಥಾಪಿಸಲಿ ಎಂದು ಸವಾಲು ಹಾಕಿದರು.

    ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಮಹಾಕಾವ್ಯದಲ್ಲಿ ಕೇವಲ ರಾಮನ ಚರಿತ್ರೆ ಮಾತ್ರವಲ್ಲ. ನಮ್ಮ ಜೀವನ ರೂಪಿಸಿಕೊಳ್ಳಲು ಅದು ಮಾರ್ಗದರ್ಶನ ನೀಡುತ್ತದೆ. ರಾಮನ ವ್ಯಕ್ತಿತ್ವವನ್ನು ಹೇಗೆ ರಚಿತವಾಗಿದೆ ಎಂಬುದನ್ನು ತಿಳಿಯಬೇಕಾದರೆ ಪ್ರತಿಯೊಬ್ಬರೂ ಇದನ್ನು ಓದಬೇಕು ಎಂದು ಹೇಳಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಶುರಾಂ ಮಾಗಾನಹಳ್ಳಿ ಮಾತನಾಡಿ ಬೇಡರಾಗಿ ಜನಿಸಿ ಜಗತ್ತಿಗೆ ರಾಮಾಯಣ ಕೃತಿ ನೀಡುವ ಮೂಲಕ ಮಹಾ ಋಷಿ ವಾಲ್ಮೀಕಿ ಜಗದ ಬೆಳಕಾಗಿದ್ದಾರೆ ಎಂದರು. ಇಂದಿನ ರಾವಣ ರಾಜ್ಯ ಸರ್ಕಾರವನ್ನು ಕಿತ್ತೊಗೆದು ಗಾಂಧಿ ಕಲ್ಪನೆಯ ರಾಮರಾಜ್ಯದ ಸರ್ಕಾರ ತರಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಹೇಳಿದರು.

    ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ ಬಿಜೆಪಿಯವರು ಬಿಂಬಿಸುವಂತೆ ಶ್ರೀರಾಮ ಒಂದು ಪಕ್ಷಕ್ಕೆ ಸೀಮಿತವಲ್ಲ. ಆತ ಎಲ್ಲರ ರಾಮನಾಗಿದ್ದಾನೆ ಎಂದು ಹೇಳಿದರು.

    ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡ ಎಸ್. ಮಲ್ಲಿಕಾರ್ಜುನ, ಜಿಲ್ಲಾ ಪ್ರ.ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಪಾಲಿಕೆ ವಿಪಕ್ಷನಾಯಕ ಎ.ನಾಗರಾಜ್, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಪಾಮೇನಹಳ್ಳಿ ನಾಗರಾಜ್, ಆಶಾ ಉಮೇಶ್, ಸುಧಾ ಇಟ್ಟಿಗುಡಿ, ಸವಿತಾ ಗಣೇಶ್ ಹುಲ್ಮನಿ, ಶ್ವೇತಾ ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಕೆಪಿಸಿಸಿ ಸದಸ್ಯ ಅಣಜಿ ಅಂಜಿನಪ್ಪ, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲು, ಮಹಿಳಾ ಕಾಂಗ್ರೆಸ್‌ನ ಶುಭಮಂಗಳ, ರಾಜೇಶ್ವರಿ, ಮೈನುದ್ದೀನ್, ಡೋಲಿ ಚಂದ್ರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts