More

    ನಭೋ ಮಂಡಲದ ಕೌತುಕಗಳ ವೀಕ್ಷಣೆ

    ದಾವಣಗೆರೆ: ಚಂದ್ರ, ಗುರುಗ್ರಹ, ನಕ್ಷತ್ರ ಪುಂಜ ಒಳಗೊಂಡಂತೆ ನಭೋ ಮಂಡಲದ ಕೌತುಕಗಳನ್ನು ಅಲ್ಲಿ ನೆರೆದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೂರದರ್ಶಕದ ಮೂಲಕ ಕಣ್ತುಂಬಿಕೊಂಡರು.
     ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಗರದ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಕುತೂಹಲದಿಂದ ವೀಕ್ಷಿಸಿದರು.
     ಸಂಪನ್ಮೂಲ ವ್ಯಕ್ತಿ ಎಂ.ಟಿ.ಶರಣಪ್ಪ ಚಂದ್ರ, ಗ್ರಹಗಳು ಹಾಗೂ ನಕ್ಷತ್ರ ಪುಂಜಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡುವ ಮೂಲಕ ಆಕಾಶಕಾಯದ ವಿಸ್ಮಯಗಳನ್ನು ತಿಳಿಸಿಕೊಟ್ಟರು.
     ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎನ್.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಜಿ.ಎಸ್.ರಾಜಶೇಖರಪ್ಪ, ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಎಚ್.ಆರ್. ವಿಶಾಲಾಕ್ಷಿ ಇತರರು ಇದ್ದರು.
     ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ವಸಂತಕುಮಾರಿ ಸ್ವಾಗತಿಸಿದರು. ಕ್ಯುರೇಟರ್ ಅರುಣ್ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts