More

    ರೈತ, ಸೈನಿಕ ಇಬ್ಬರೂ ದೇಶದ ಬೆನ್ನೆಲುಬು

    ದಾವಣಗೆರೆ : ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ ಇಬ್ಬರೂ ನಮ್ಮ ದೇಶದ ಬೆನ್ನೆಲುಬು. ಅವರನ್ನು ಗೌರವ ಭಾವನೆಯಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ ಎಂದು ಅನ್‌ಮೋಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಜಿ. ದಿನೇಶ್ ಹೇಳಿದರು.
     ಸಮೀಪದ ಶಿರಮಗೊಂಡನಹಳ್ಳಿಯ ಅನ್‌ಮೋಲ್ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ‘ಅನ್‌ಮೋಲ್ ಉತ್ಸವ 2023’ ಕಾರ್ಯಕ್ರಮದಲ್ಲಿ ಮಾತನಾಡಿದರು.
     ರೈತ ಮತ್ತು ಸೈನಿಕ ಇವರಲ್ಲಿ ಯಾರಾದರೊಬ್ಬರು ತಮ್ಮ ಕರ್ತವ್ಯ ನಿಭಾಯಿಸದಿದ್ದರೆ ನಾಶವಾಗುವ ಸ್ಥಿತಿ ನಿರ್ಮಾಣವಾಗುತ್ತದೆ. ದೇಶದೊಳಗೆ ಬೆಚ್ಚಗಿರುವ ನಾವು ಇದನ್ನು ಅರಿತು ಬಾಳಬೇಕಿದೆ ಎಂದು ತಿಳಿಸಿದರು.
     2022-23 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವರ್ಷದ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೈತ ಮತ್ತು ಸೈನಿಕರಿಗೆ ಸಂಬಂಧಿಸಿದ ಗೀತಗಾಯನ, ನೃತ್ಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
     ಈ ಬಾರಿಯ ಉತ್ಸವಕ್ಕೆ ‘ಜೈ ಜವಾನ್ – ಜೈ ಕಿಸಾನ್’ ಎಂಬ ಶೀರ್ಷಿಕೆ ನೀಡಲಾಗಿತ್ತು. ಸಂಸ್ಥೆಯ ಉಪಾಧ್ಯಕ್ಷ ಡಿ.ವಿ. ರವೀಂದ್ರ, ಖಜಾಂಚಿ ಎಸ್.ಎಸ್. ರಾಜು, ಜಂಟಿ ಕಾರ್ಯದರ್ಶಿ ಕೆ.ಇ. ಭೈರೇಶ್, ಸದಸ್ಯರಾದ ಬಿ.ಒ. ಉಮೇಶ್, ಕೆ.ಎನ್. ಶಿವಲಿಂಗಪ್ಪ, ಟಿ.ಪಿ. ಕಲ್ಲೇಶ್, ಬಿ.ಯು. ಪ್ರಕಾಶ್, ಸಂಸ್ಥೆಯ ಸಲಹಾ ಸಮಿತಿಯ ಸದಸ್ಯ ಎಸ್. ಚಿದಾನಂದ್, ಪ್ರಾಚಾರ್ಯ ಯು. ಕೊಟ್ರೇಶ್, ಎಲ್. ಸುಬ್ರಹ್ಮಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts