More

    ವ್ಯಾಪಕ ಮಳೆಯಾದರೆ ಬಿತ್ತನೆ ಪ್ರಮಾಣ ಹೆಚ್ಚಳ

    ದಾವಣಗೆರೆ : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಹದ ಮಳೆಯಾಗುತ್ತಿರುವುದು ಶುಭ ಸೂಚನೆಯಾಗಿದೆ. ಆದರೆ ಇಷ್ಟೇ ಸಾಲದು, ರೈತರು ಭೂಮಿ ಹಸಿಯಾಗುವಷ್ಟು ದೊಡ್ಡ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕೆಲವೇ ಭಾಗಗಳಲ್ಲಿ ಆದರೆ ಪ್ರಯೋಜನವಿಲ್ಲ, ವ್ಯಾಪಕವಾದಾಗ ಮಾತ್ರ ಬಿತ್ತನೆಗೆ ಅನುಕೂಲವಾಗಲಿದೆ.
     ಮುಂಗಾರು ನಿರೀಕ್ಷೆಯಲ್ಲಿ ಕೃಷಿಕರು ಭೂಮಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಮಳೆಯ ಕೊರತೆಯಿಂದಾಗಿ ಬಿತ್ತಲು ಮುಂದಾಗಿರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತವಾಗಿತ್ತು.
     ಈಗ ಚೇತರಿಕೆ ಕಂಡುಬಂದಿದ್ದು ಕೆಲವು ಪ್ರದೇಶಗಳಲ್ಲಿ ಬಿತ್ತನೆ ಪ್ರಗತಿಯಲ್ಲಿದೆ. ಭೂಮಿ ಹಸಿಯಾಗದ ಕಡೆಗಳಲ್ಲಿ ರೈತರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳೂ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
     ಜೂನ್‌ನಲ್ಲಿ 79 ಮಿ.ಮೀ. ವಾಡಿಕೆಗೆ 48 ಮಿ.ಮೀ. ಮಳೆಯಾಗಿದ್ದು ಶೇ. 39ರಷ್ಟು ಕೊರತೆಯಾಗಿದೆ. ಕಳೆದ 7 ದಿನಗಳಲ್ಲಿ 19 ಮಿ.ಮೀ. ವಾಡಿಕೆಗೆ 17 ಮಿ.ಮೀ. ಆಗಿದ್ದು ಶೇ. 13ರಷ್ಟು ಕೊರತೆಯಿದೆ. ಜನವರಿಯಿಂದ ಇಲ್ಲಿಯ ವರೆಗೆ ಒಟ್ಟು 190 ಮಿ.ಮೀ. ವಾಡಿಕೆಗೆ 118 ಮಿ.ಮೀ. ಆಗಿದ್ದು ಶೇ. 38ರಷ್ಟು ಕೊರತೆಯಾಗಿದೆ.
     ಮಳೆ ವಿಳಂಬವಾಗಿದೆ ಎಂದು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಈ ತಿಂಗಳ 20ರ ವರೆಗೂ ಮೆಕ್ಕೆಜೋಳ ಬಿತ್ತನೆ ಮಾಡಲು ಅವಕಾಶವಿದೆ ಎನ್ನುತ್ತಾರೆ ಅಧಿಕಾರಿಗಳು. ರಾಗಿ, ಸೂರ್ಯಕಾಂತಿ, ಉಳಿದೆಲ್ಲ ಬೆಳೆಗಳಿಗೂ ಬಿತ್ತನೆಗೆ ಇನ್ನೂ ಸಮಯವಿದೆ. ಬಹಳ ವಿಳಂಬವಾದರೆ ಇಳುವರಿ ಕುಂಠಿತವಾಗುವ ಆತಂಕವಿರುತ್ತದೆ. ಆದರೆ ಹತ್ತಿ ಬಿತ್ತನೆಯ ಕಾಲ ಮುಗಿದಿದೆ.
     ಜಿಲ್ಲೆಯಲ್ಲಿ 2.45 ಲಕ್ಷ ಹೆಕ್ಟೇರ್ ಗುರಿಗೆ ಜೂನ್ ಅಂತ್ಯಕ್ಕೆ 17,936 ಹೆಕ್ಟೇರ್ (ಶೇ. 7.31) ಬಿತ್ತನೆಯಾಗಿತ್ತು. ಮುಂಬರುವ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts