More

    ಬೆಳೆ ಹಾನಿ, ತುಂಬಿದ ಕೆರೆ ಕಟ್ಟೆಗಳಿಗೆ ಜೀವ ಕಳೆ

    ದಾವಣಗೆರೆ: ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಜಿಲ್ಲೆಯ ಹಲವು ಕೆರೆ ಕಟ್ಟೆಗಳು ತುಂಬಿವೆ. ಭತ್ತ, ಮೆಕ್ಕೆಜೋಳ, ಅಡಕೆ, ಬಾಳೆ ಸೇರಿದಂತೆ ನೂರಾರು ಎಕರೆ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

    ದಾವಣಗೆರೆ ತಾಲೂಕು ಮಾಗಾನಹಳ್ಳಿ, ಅರಸಾಪುರ, ಕಡ್ಲೇಬಾಳು, ದೊಡ್ಡ ಓಬಜ್ಜಿಹಳ್ಳಿ, ಕೋಡಿ ಕ್ಯಾಂಪ್, ಅಮೃತನಗರ, ಬದಿಯನಾಯ್ಕನ ತಾಂಡಾ, ಹಳೇ ಕಡ್ಲೇಬಾಳು ಗ್ರಾಮಗಳಲ್ಲಿ ನೂರಾರು ಎಕರೆ ಭತ್ತದ ಬೆಳೆಯು ನೆಲ ಕಚ್ಚಿದೆ. ಅಣಬೇರು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ತಾಲೂಕಿನಲ್ಲಿ 35 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

    ಹರಿಹರ ತಾಲೂಕು ದೇವರಬೆಳಕೆರೆ ಗ್ರಾಮದಲ್ಲಿ 22 ಎಕರೆ ಸೇರಿದಂತೆ ಒಟ್ಟು 50 ಎಕರೆ ಭತ್ತದ ಬೆಳೆ ನಾಶವಾಗಿದೆ. ಕೊಮಾರನಹಳ್ಳಿ ಕೆರೆಗೆ ಕೋಡಿ ಬಿದ್ದಿದೆ.

    ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ವ್ಯಾಪ್ತಿಯಲ್ಲಿ 10 ಹೆ. ಶೇಂಗಾ ನೀರು ಪಾಲಾಗಿದೆ. ಬಾಳೆ ಮತ್ತು ಅಡಕೆ ತಲಾ ಒಂದೊಂದು ಹೆ. ಹಾನಿಗೊಳಗಾಗಿವೆ. ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 23.55 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.

    ಜಿಲ್ಲೆಯಲ್ಲಿ 36 ಮಿ.ಮೀ. ಸರಾಸರಿ ಮಳೆಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 34 ಮಿ.ಮೀ, ದಾವಣಗೆರೆ 60 ಮಿ.ಮೀ, ಹರಿಹರ 20 ಮಿ.ಮೀ, ಹೊನ್ನಾಳಿ 13 ಮಿ.ಮೀ, ಜಗಳೂರು 46 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 7 ಮಿ.ಮೀ. ಮಳೆಯಾಗಿದೆ.

    ಭತ್ತ ಕಾಳು ಕಟ್ಟುವ ಹಂತದಲ್ಲಿತ್ತು. ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿತ್ತು. ರಾತ್ರಿ ಸುರಿದ ಮಳೆ, ಗಾಳಿಗೆ ನೆಲಕಚ್ಚಿವೆ.
    > ಪರಶುರಾಂ, ಕಡ್ಲೆಬಾಳು ಗ್ರಾ.ಪಂ. ಮಾಜಿ ಅಧ್ಯಕ್ಷ

    ಮಳೆಯ ಹೊಡೆತಕ್ಕೆ ನನ್ನ 8 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಕೆಲವು ಜಮೀನುಗಳಲ್ಲಿ ಇನ್ನು 5 ದಿನದಲ್ಲಿ, ಇನ್ನೂ ಕೆಲವು ಕಡೆಗಳಲ್ಲಿ 15, 20 ದಿನಗಳಲ್ಲಿ ಕೊಯ್ಯಬೇಕಿತ್ತು. ಈ ಹಂತದಲ್ಲಿ ಮಳೆ ಹೊಡೆತ ಕೊಟ್ಟಿದೆ.
    > ಅಂಜಿಬಾಬು, ಮಾಗಾನಹಳ್ಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts