More

    ರೈಲ್ವೆ ಸಂರಕ್ಷಣಾ ಪಡೆಯಿಂದ ಸಾರ್ವಜನಿಕರಿಗೆ ಅರಿವು

    ದಾವಣಗೆರೆ : ರೈಲು ಪ್ರಯಾಣವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ದಾವಣಗೆರೆ ರೈಲ್ವೆ ಸಂರಕ್ಷಣಾ ಪಡೆಯಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ.
     ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸುವ ಜತೆಗೆ ಹಳ್ಳಿಗಳಲಿ, ಶಾಲಾ ಕಾಲೇಜುಗಳಲ್ಲೂ ತಿಳಿವಳಿಕೆ ನೀಡಲಾಗುತ್ತಿದೆ. ಅನವಶ್ಯಕವಾಗಿ ಸರಪಳಿ ಎಳೆಯದಂತೆ ಮನವಿ ಮಾಡಲಾಗುತ್ತಿದೆ.
     ಕಳೆದ ಎರಡು ತಿಂಗಳಿನಿಂದ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಕೋವಿಡ್ ಆತಂಕದ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
     ಈ ನಡುವೆ ರೈಲುಗಳಲ್ಲಿ ಚೈನ್ ಎಳೆಯುವ ಅನೇಕ ಪ್ರಕರಣಗಳು ವರದಿಯಾಗಿದ್ದು, ಅನಗತ್ಯವಾಗಿ ರೈಲುಗಳನ್ನು ನಿಲ್ಲಿಸುತ್ತಿದ್ದಾರೆ. ಅನವಶ್ಯಕವಾಗಿ ಚೈನ್ ಎಳೆಯುವುದು ರೈಲ್ವೆ ಕಾಯ್ದೆ 1989ರ ಸೆಕ್ಷನ್ 141ರ ಅಡಿಯಲ್ಲಿ 1 ಸಾವಿರ ರೂ. ದಂಡ ಅಥವಾ 3 ತಿಂಗಳು ಜೈಲು ಶಿಕ್ಷೆ, ಕೆಲವೊಮ್ಮೆ ಎರಡೂ ವಿಧಿಸುವ ಸಾಧ್ಯತೆ ಇರುತ್ತದೆ ಎಂದು ರೈಲ್ವೆ ಸಂರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
     ಈ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಕಲ್ಲು ತೂರಾಟ ಮಾಡುವುದು, ಹಳಿಯಲ್ಲಿ ಕಲ್ಲು ಇಟ್ಟುಕೊಳ್ಳುವುದು, ಹಳಿಯನ್ನು ದಾಟುವುದು ಮಾಡದಂತೆ ವಿನಂತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts