More

    ಸಾಧನೆಯ ಹಾದಿಯಲ್ಲಿ ಇರಲಿ ಗುರಿ

    ದಾವಣಗೆರೆ : ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಸಾಧನೆ ಮಾಡಿ ಸಮಾಜದ ಗೌರವ ಹೆಚ್ಚಿಸಬೇಕು ಎಂದು ತಾಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ಹೇಳಿದರು.
     ತಾಲೂಕು ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ನಗರದ ಶ್ರೀ ಶಂಕರ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
     ಹೆಣ್ಣು ಮಕ್ಕಳು ಲವ್ ಜಿಹಾದ್ ಇತ್ಯಾದಿ ಕುತಂತ್ರಗಳಿಗೆ ಬಲಿಯಾಗದೆ ಭವಿಷ್ಯದ ಕಡೆ ಗಮನ ಹರಿಸಬೇಕು. ತಂದೆ, ತಾಯಿಗಳನ್ನು ಮರೆಯದೆ, ಅವರು ವೃದ್ಧಾಶ್ರಮಗಳಿಗೆ ಎಂದೂ ಸೇರುವ ಪರಿಸ್ಥಿತಿ ಬರದಂತೆ ಚೆನ್ನಾಗಿ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
     ವಿಪ್ರ ಬ್ಯುಸಿನೆಸ್‌ದಾರರ ಕೈಪಿಡಿ ಹೊರತರುವ ಉದ್ದೇಶವಿದ್ದು, ಅದಕ್ಕಾಗಿ ವ್ಯಾಪಾರ, ವ್ಯವಹಾರ, ಸ್ವಯಂ ಉದ್ಯೋಗಸ್ಥರು ನಿಗದಿತ ನಮೂನೆಯಲ್ಲಿ ವಿವರಗಳನ್ನು ಸಲ್ಲಿಸುವಂತೆ ತಿಳಿಸಿದರು.
     ಮೈಸೂರಿನ ಬ್ಯುಸಿನೆಸ್ ಬೈ ಬ್ರಾಹ್ಮಿನ್ಸ್‌ನ ಅಧ್ಯಕ್ಷ ಅನಂತ ನಾಗರಾಜ್ ಮತ್ತು ನಿರ್ದೇಶಕ ನರಸಿಂಹ ಪ್ರಸಾದ್ ಭಾಗವಹಿಸಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಮತ್ತು ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ, ಮತ್ತು ಕ್ರೀಡಾ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿಪ್ರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ, ನಗದು ಬಹುಮಾನವನ್ನು ನೀಡಿ ಗೌರವಿಸಿದರು.
     ಸಮಾಜದ ಮುಖಂಡರಾದ ಸತ್ಯನಾರಾಯಣ ರಾವ್, ಮೋತಿ ಆರ್. ಸುಬ್ರಹ್ಮಣ್ಯ, ಉಮಾಕಾಂತ್ ದೀಕ್ಷಿತ್, ಪಿ.ಜಿ ರಂಜನ್, ಬಾಲಕೃಷ್ಣ ವೈದ್ಯ, ಶೇಷಾಚಲ, ರಾಮಚಂದ್ರರಾವ್, ಉಮೇಶ್ ಕುಲಕರ್ಣಿ, ಹರಿಹರದ ಉದ್ಯಮಿಗಳಾದ ಸತ್ಯನಾರಾಯಣ, ಡಾ. ಸುರೇಶ್ ಬಾಬು ಭಾಗವಹಿಸಿದ್ದರು.
     ಸಮಾಜದ ಕಾರ್ಯದರ್ಶಿ ಗೋಪಾಲ್ ದಾಸ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts