More

    ಸಾಮಾಜಿಕ ಹೋರಾಟ ಅನಿವಾರ್ಯ

    ದಾವಣಗೆರೆ : ಗ್ರಾಮೀಣ ಜನಜೀವನ, ಶಿಕ್ಷಣ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸಾಮಾಜಿಕ ಹೋರಾಟ ಅನಿವಾರ್ಯವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಹೇಳಿದರು.
     ವಿನಯ ಮಾರ್ಗ ಟ್ರಸ್ಟ್ ವತಿಯಿಂದ ಮಂಗಳವಾರ, ಚನ್ನಗಿರಿ ತಾಲೂಕಿನ ಹಾಲೇಶಪುರ, ಗುಡ್ಡದ ಕೊಮಾರನಹಳ್ಳಿ, ಜಿ. ಮಲ್ಲಿಗೇನಹಳ್ಳಿ, ಗಾಣದಕಟ್ಟೆ, ಲಿಂಗದಹಳ್ಳಿ, ನಲ್ಲೂರು ಗ್ರಾಮಗಳಲ್ಲಿ ನಡೆದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಗ್ರಾಮ ವಾಸ್ತವ್ಯದಲ್ಲಿ ಕಂಡುಬಂದ ದೊಡ್ಡ ಸಮಸ್ಯೆ ಎಂದರೆ ಶಾಲಾ ಕೊಠಡಿಗಳ ದುಃಸ್ಥಿತಿ ಹಾಗೂ ತಾರತಮ್ಯ. ಈ ವ್ಯವಸ್ಥೆ ಹೋಗಬೇಕಾಗಿದೆ. ಜನಪ್ರತಿನಿಧಿಗಳಿಗೆ ಆತ್ಮಸಾಕ್ಷಿ ಇದ್ದರೆ ಇಂತಹ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದರು.
     ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ತಿಳಿದುಕೊಂಡು ಜನರ ಮಧ್ಯೆ ಬಂದು, ಹಳ್ಳಿಗಳನ್ನು ಸುತ್ತಾಟ ಮಾಡುತ್ತಿದ್ದೇನೆ. ನಮ್ಮಂತಹ ಯುವಕರಿಗೆ ಅವಕಾಶ ಕಲ್ಪಿಸಿದಾಗ ಜನರ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಕ್ಷೇತ್ರದ ಜನರ ಸರ್ವತೋಮುಖ ಅಭಿವೃದ್ಧಿಗೆ ದುಡಿಯುವುದಾಗಿ ತಿಳಿಸಿದರು.
     ಸಮಾಜಕ್ಕೆ ಏನಾದರೂ ಮಾಡಬೇಕೆಂಬ ತುಡಿತ ನನ್ನಲ್ಲಿದೆ. ಸಮಾಜ ಸೇವೆ ಮಾಡಬೇಕೆಂಬ ಹಂಬಲ, ಛಲವಿದೆ. ರಾಜಕಾರಣಕ್ಕೆ ಹೊಸಬರು ಅವಶ್ಯಕವಾಗಿದೆ. ಇದು ದಾವಣಗೆರೆ ಜಿಲ್ಲೆಯಿಂದಲೇ ಆರಂಭವಾಗಬೇಕಿದೆ. ಚುನಾವಣಾ ಪೂರ್ವದಲ್ಲಿ ಯಾರೂ ಪಾದಯಾತ್ರೆ ಮಾಡಿದ ಇತಿಹಾಸವಿಲ್ಲ. ನಾನು ಗ್ರಾಮೀಣ ಜನರ ಸಂಪರ್ಕವನ್ನು ಬೆಳೆಸಿಕೊಂಡು, ಕಾರ್ಯ ವೈಖರಿ, ಬದ್ಧತೆಯ ಬಗ್ಗೆ ಜನರ ಮುಂದೆ ಹೇಳಿ ಚುನಾವಣೆಯಲ್ಲಿ ಸ್ಪರ್ಧಿಸಲು ತಿರ್ಮಾನಿಸಿದ್ದೇನೆ ಎಂದು ಹೇಳಿದರು.
     ಚನ್ನಗಿರಿ ತಾಲೂಕಿನಲ್ಲಿ 6 ದಿನಗಳ ಕಾಲ 60 ಹಳ್ಳಿಗಳಲ್ಲಿ ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯ ನಡೆಯಲಿದೆ ಎಂದರು. ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು, ಯುವಕರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts