More

    ಮಹಾನಗರ ಪಾಲಿಕೆಗೆ ಕರವೇ ಮುತ್ತಿಗೆ

    ದಾವಣಗೆರೆ: ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದರು.
     ಪಾಲಿಕೆ ಆವರಣದಿಂದ ಮೆರವಣಿಗೆ ಹೊರಟು ಪಾಲಿಕೆಯ ಆರೋಗ್ಯ ಅಧಿಕಾರಿಗಳ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
     ಮನವಿ ಸ್ವೀಕರಿಸಿದ ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್ ಒಂದು ವಾರ ಸಮಯಾವಕಾಶ ಕೇಳಿದರು. ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಮಾರ್ಚ್ 10ರ ಒಳಗಾಗಿ ಎಲ್ಲ ನಾಮಫಲಕ, ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಮತ್ತೆ ಮುತ್ತಿಗೆ ಹಾಕುವುದಾಗಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಎಚ್ಚರಿಸಿದರು.
     ನಗರದ 300 ಜಾಹೀರಾತು ಫಲಕ ಮತ್ತು ಅಂಗಡಿ, ಮುಂಗಟ್ಟು, ಶಾಲಾ-ಕಾಲೇಜು, ಪೆಟ್ರೋಲ್ ಬಂಕ್‌ಗಳ ಆಂಗ್ಲ ಭಾಷೆಯ ಜಾಹೀರಾತು ಫಲಕಗಳ ಛಾಯಾ ಚಿತ್ರಗಳನ್ನು ಪಾಲಿಕೆಗೆ ಕಳುಹಿಸಿಕೊಡಲಾಗಿತ್ತು. ಆದರೆ ಅಧಿಕಾರಿಗಳು ಕಾಟಾಚಾರಕ್ಕೆ ನೋಟಿಸ್ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
     ಸರ್ಕಾರ ಮಾರ್ಚ್ 13ರ ಒಳಗಾಗಿ ಎಲ್ಲ ನಾಮಫಲಕಗಳು ಕನ್ನಡದಲ್ಲಿ ಇರಬೇಕೆಂದು ಆದೇಶಿಸಿದೆ. ಆದರೆ ಮೇಯರ್ ಅಥವಾ ಆಯುಕ್ತರು ಯಾವುದೇ ಸಭೆ ಕರೆದಿಲ್ಲ. ಫ್ಲೆಕ್ಸೃ್ ಮುದ್ರಣ ಮಾಡುವವರಿಗೆ ಖಡಕ್ ಸೂಚನೆ ನೀಡಬೇಕು. ಅಥವಾ ಅವರ ಪರವಾನಗಿ ರದ್ದುಪಡಿಸಬೇಕು. ಇಲ್ಲವೇ ಅಂಗಡಿಗಳಿಗೆ ಬೀಗ ಹಾಕಬೇಕು ಎಂದು ಒತ್ತಾಯಿಸಿದರು.
     ಮುಖಂಡರಾದ ಬಸಮ್ಮ, ನೇತ್ರಾವತಿ, ಮಾಲಾ ಡಿ. ಮಲ್ಲಿಕಾರ್ಜುನ್, ಗೋಪಾಲ್ ದೇವರಮನಿ, ಎನ್.ಟಿ. ಹನುಮಂತಪ್ಪ, ಜಿ.ಎಸ್. ಸಂತೋಷ್, ಜಬಿವುಲ್ಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts