More

    309 ಹೃದ್ರೋಗಿಗಳಿಗೆ ಚಿಕಿತ್ಸೆ

    ದಾವಣಗೆರೆ: ಕೋವಿಡ್ ಸಂದಿಗ್ಧತೆಯ ನಡುವೆಯೂ ನಗರದ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್‌ನ ಹೃದಯ ರೋಗ ತಜ್ಞರು ಜೂನ್‌ನಲ್ಲಿ 309 ಹೃದ್ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ಕಲ್ಪಿಸಿದೆ.

    309 ರೋಗಿಗಳ ಪೈಕಿ 18 ಮಂದಿಗೆ ಪ್ರಾಥಮಿಕ ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ. 111 ಜನರಿಗೆ ಪಿಟಿಸಿಎ (ಪರ್ಕ್ಯುಟೇನಿಯಸ್ ಟ್ರಾನ್ಸುೃಮಿನಲ್ ಕರೋನರಿ ಆಂಜಿಯೋಪ್ಲಾಸ್ಟಿ) ಮತ್ತು 16 ರೋಗಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇದರೊಂದಿಗೆ ಆಸ್ಪತ್ರೆಯ 1 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಒಪಿಡಿ ಘಟಕದಲ್ಲಿ ಹೃದಯ ತಪಾಸಣೆ ನಡೆಸಲಾಗಿದೆ.

    ಎನ್‌ಎಬಿಎಚ್ ಮಾನ್ಯತೆ ಪಡೆದ ಎಸ್‌ಎಸ್ ನಾರಾಯಣ ಹಾರ್ಟ್ ಸೆಂಟರ್, ವಿಶ್ವದರ್ಜೆಯ ಆಪರೇಟಿಂಗ್ ಥಿಯೇಟರ್, ಅತ್ಯಾಧುನಿಕ ವೈದ್ಯಕೀಯ ಸಾಧನ ಸಲಕರಣೆಗಳಿಂದ ಕೂಡಿದ ಸುಸಜ್ಜಿತ ಹೃದಯ ಚಿಕಿತ್ಸಾ ಕೇಂದ್ರವಾಗಿದೆ. ನಾರಾಯಣ ಹೆಲ್ತ್ ಮತ್ತು ಎಸ್‌ಎಸ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅ್ಯಂಡ್ ರೀಸರ್ಚ್ ಸೆಂಟರ್‌ನ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

    ಇಬ್ಬರು ಅನುಭವಿ ಹೃದ್ರೋಗ ಶಸ್ತ್ರಚಿಕಿತ್ಸಕರು, ಮೂವರು ಹೃದ್ರೋಗ ತಜ್ಞರು, ಇಬ್ಬರು ಹೃದಯ ರೋಗ ಅರವಳಿಕೆ ತಜ್ಞರು, ನೈಪುಣ್ಯತೆ ಹೊಂದಿದ ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ತಂಡ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕರೋನರಿ ಆಂಜಿಯೋಗ್ರಫಿ, ಕರೋನರಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟಿಂಗ್, ಬಲೂನ್ ವಾಲ್ವ್ ಪ್ರೊಸೀಜರ್, ಜನ್ಮಜಾತ ಹೃದಯದೋಷಕ್ಕೆ ಡಿವೈಸ್ ಕ್ಲೋಶರ್, ತೆರೆದ ಹೃದಯ ಶಸ್ತ್ರಚಿಕಿತ್ಸೆ, ಬೈಪಾಸ್ ಸರ್ಜರಿ, ತೋರಾಸಿಕ್ ಮತ್ತು ವ್ಯಾಸ್ಕುೃಲರ್ ಶಸ್ತ್ರಚಿಕಿತ್ಸೆ ಮತ್ತು ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಸೌಲಭ್ಯವಿದೆ.

    ಎಲ್ಲಾ ರೋಗಿಗಳಿಗೆ ಕೋವಿಡ್ ಪರೀಕ್ಷೆ ನಡೆಸುವ ಜತೆಗೆ ಸಿಬ್ಬಂದಿಗೆ ಸೂಕ್ತ ಪಿಪಿಇ ಕಿಟ್‌ಗಳನ್ನು ಒದಗಿಸಲಾಗಿದೆ. ಡಿಜಿಟಲ್ ಫ್ಲಾಟ್‌ಫಾರಂಗಳ ಮೂಲಕ ರೋಗಿಗಳು ವೈದ್ಯರ ಜತೆ ಸಂಪರ್ಕ ಸಾಧಿಸಲು ನೆರವಾಗಿದ್ದೇವೆ ಎಂದು ಈ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಂಡಾರಿಗಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts