More

    ವಿಭಾಗ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿ

    ದಾವಣಗೆರೆ : ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 14/17 ವರ್ಷವಯೋಮಿತಿಯೊಳಗಿನ ಬೆಂಗಳೂರು ವಿಭಾಗ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಮಧುಗಿರಿ ಹಾಗೂ ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿವೆ.
     ಹ್ಯಾಂಡ್‌ಬಾಲ್ ಅಂತಿಮ ಪಂದ್ಯಾವಳಿಯ ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ ವಿಜೇತ ತಂಡಗಳ ವಿರುದ್ಧ ಸೆಣಸಿದ ದಾವಣಗೆರೆ ಜಿಲ್ಲೆಯ ಬಾಲಕಿಯರು ಹಾಗೂ ಬಾಲಕರ ತಂಡಗಳು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.
     ಪೈನಲ್‌ನಲ್ಲಿ ಮಧುಗಿರಿ 7 ಮತ್ತು ದಾವಣಗೆರೆ ಜಿಲ್ಲೆ 5 ಗೋಲು  ಹಾಗೂ ಬೆಂಗಳೂರು ಉತ್ತರ 9 ಮತ್ತು ದಾವಣಗೆರೆ ಜಿಲ್ಲೆ 8 ಗೋಲು ಗಳಿಸಿದವು. ಎರಡೂ ವಿಭಾಗದಲ್ಲಿ ತಾಲೂಕಿನ ತುರ್ಚಘಟ್ಟ ಆಂಜನೇಯ ಪ್ರೌಢಶಾಲೆ ದಾವಣಗೆರೆ ಜಿಲ್ಲೆ ಪ್ರತಿನಿಧಿಸಿ ದ್ವಿತೀಯ ಬಹುಮಾನ ಪಡೆದಿರುವುದು ವಿಶೇಷ.
      ಬೆಳಗ್ಗೆಯಿಂದಲೇ ನಡೆದ ಪಂದ್ಯಾವಳಿಗಳಲ್ಲಿ ರಾಜ್ಯದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಮಧುಗಿರಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ ಬಾಲಕರು ಮತ್ತು ಬಾಲಕಿಯರ ತಲಾ 11 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆಲುವಿಗೆ ಸೆಣಸಿದವು.
     ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ (ಪ್ರಭಾರ) ಎನ್.ಪಿ ಮಂಜುಳಾ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts