More

    ಅಮೆರಿಕದಲ್ಲೇ ಅಂತ್ಯಕ್ರಿಯೆ

    ದಾವಣಗೆರೆ : ಅಮೆರಿಕದಲ್ಲಿ ಕಳೆದ ವಾರ ಮೃತಪಟ್ಟ ದಾವಣಗೆರೆ ಮೂಲದ ಇಂಜಿನಿಯರ್ ದಂಪತಿ ಯೋಗೇಶ್ ಹೊನ್ನಾಳ್-ಪ್ರತಿಭಾ ಹೊನ್ನಾಳ್ ಮತ್ತು ಪುತ್ರ ಯಶ್ ಹೊನ್ನಾಳ್ ಅವರ ಅಂತ್ಯಕ್ರಿಯೆ ಭಾರತೀಯ ಕಾಲಮಾನದ ಪ್ರಕಾರ ಶನಿವಾರ ಮಧ್ಯರಾತ್ರಿ ಅಮೆರಿಕದಲ್ಲಿಯೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
     ಈ ಹಿನ್ನೆಲೆಯಲ್ಲಿ ಯೋಗೇಶ್ ತಾಯಿ ಶೋಭಾ ಮತ್ತು ಸಹೋದರ ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿನ ಮ್ಯಾಕ್ ನ್ಯಾಬ್ ಫ್ಯುನರಲ್ ಹೋಮ್‌ನಲ್ಲಿ ಅಂತ್ಯಕ್ರಿಯೆ ಕೈಗೊಳ್ಳಲು ನಿರ್ಧರಿಸಲಾಗಿದ್ದು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
     ಈ ಕುರಿತು ಜಿಲ್ಲಾಡಳಿತಕ್ಕೂ ಮಾಹಿತಿ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts