More

    ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಗೆ ವಿರೋಧ

    ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕೈಬಿಡುವಂತೆ ಆಗ್ರಹಿಸಿ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಜಯಚಾಮರಾಜೇಂದ್ರ ವೃತ್ತದಿಂದ ಜಯದೇವ ವೃತ್ತದ ಮೂಲಕ ಬೆಸ್ಕಾಂ ಕಚೇರಿಗೆ ತೆರಳಿದ ರೈತರು, ಬೆಸ್ಕಾಂ ಅಧೀಕ್ಷಕ ಬಿ.ಎಸ್. ಜಗದೀಶ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.

    ಕೃಷಿ ಪಂಪ್‌ಸೆಟ್‌ಗಳಿಗೆ ಇದುವರೆಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದ ಸರ್ಕಾರ, ಇದೀಗ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಮೀಟರ್ ಅಳವಡಿಕೆಗೆ ಹುನ್ನಾರ ನಡೆಸಿದೆ. ಇದು ರೈತರಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ದೂರಿದರು.

    ಪ್ರತಿಭಟನೆಯಲ್ಲಿ ಚಿಕ್ಕತೊಗಲೇರಿ ಕೆಂಚಪ್ಪ, ಹುಚ್ಚವ್ವನಹಳ್ಳಿ ಸಿದ್ದಪ್ಪ ನಾಯಕ, ಹುಚ್ಚವ್ವನಹಳ್ಳಿ ಪ್ರಕಾಶ್, ವಿ.ಎಚ್.ರಾಮಚಂದ್ರ, ಕೋಲ್ಕುಂಟೆ ಉಚ್ಚೆಂಗಪ್ಪ,ಎಚ್.ಬಸವಾಪುರದ ಸಿದ್ದೇಶ, ಚಿಕ್ಕಮ್ಮನಹಳ್ಳಿ ಚಿರಂಜೀವಿ, ಗೌಡಗನಹಳ್ಳಿ ಸತೀಶ್, ಕೆಂಚಮ್ಮನಹಳ್ಳಿ ಹನುಮಂತ, ಆಲೂರು ಪರಶುರಾಂ, ಕುರ್ಕಿ ಹನುಮಂತ, ಕೋಗಲೂರು ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts