More

    ಚುನಾವಣಾ ಕರ್ತವ್ಯ ನ್ಯಾಯ ಸಮ್ಮತವಾಗಿರಲಿ

    ದಾವಣಗೆರೆ : ಚುನಾವಣಾ ಆಯೋಗದ ನಿರ್ದೇಶನದಂತೆ ಪಾರದರ್ಶಕ, ನ್ಯಾಯ ಸಮ್ಮತ, ನಿಷ್ಪಕ್ಷಪಾತವಾಗಿ ಎಲ್ಲ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
     ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಮುಂಬರುವ ಲೋಕಸಭಾ ಪ್ರಯುಕ್ತ ಚುನಾವಣಾ ವಿವಿಧ ತಂಡಗಳ ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಚುನಾವಣಾ ಕರ್ತವ್ಯ ಬಹಳ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು, ನಿರ್ಲಕ್ಷೃದಿಂದ ಕಾರ್ಯನಿರ್ವಹಿಸದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸರಿಯಾಗಿ ದಾಖಲು ಮಾಡುವ ಮೂಲಕ ಪೂರಕವಾದ ಸಾಕ್ಷಿಗಳ ಕ್ರೋಡೀಕರಣ ಮಾಡಿಕೊಳ್ಳಬೇಕು ಎಂದರು.
     ಚನಾವಣಾ ವೇಳೆ ಚೆಕ್‌ಪೋಸ್ಟ್ಗಳಲ್ಲಿ ಅನುಸರಿಸಬೇಕಾದ ಕ್ರಮಗಳು, ಚುನಾವಣಾ ರ‌್ಯಾಲಿಗಳ ಸಂದರ್ಭದಲ್ಲಿ ಖರ್ಚುವೆಚ್ಚಗಳ ನಿಗಾ ವಹಿಸುವಿಕೆ, ಚುನಾವಣಾ ಪ್ರಚಾರಕ್ಕೆ ಅನುಮತಿ ಇಲ್ಲದೆ ಕರಪತ್ರ ಹಂಚಿಕೆ, ನೀತಿ ಸಂಹಿತೆ ಉಲ್ಲಂಘನೆ, ಹಣ ಮತ್ತು ಮದ್ಯ ಹಂಚಿಕೆ, ಉಡುಗೊರೆ ಹಂಚಿಕೆ ಕುರಿತಂತೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳ ಬೇಕಾದ ಕಾಯ್ದೆ ಮತ್ತು ಸೆಕ್ಷನ್‌ಗಳ ಮಾಹಿತಿ ನೀಡಿದರು.
      ಸಹಾಯಕ ಚುನಾವಣೆ ಅಧಿಕಾರಿಗಳು ಚೆಕ್‌ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುವ ಸ್ಟಾೃಟಿಕ್ ಸರ್ವೆಲೆನ್ಸ್ ಟೀಮ್,  ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ಸರ್ವಲೆನ್ಸ್ ಟೀಮ್, ವೀಡಿಯೋ ವೀವಿಂಗ್ ಟೀಮ್, ಅಬಕಾರಿ ತಂಡ, ವಾಣಿಜ್ಯ ತೆರಿಗೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ತಂಡಗಳ ನೋಡಲ್ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯ ಬಗ್ಗೆ ತರಬೇತಿ ನೀಡಲಾಯಿತು.
     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್. ಬಳ್ಳಾರಿ, ತರಬೇತುದಾರ ಅರವಿಂದ್ ಐರಣಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts