More

    ನವರಾತ್ರಿ ಉತ್ಸವಕ್ಕೆ ಕಳೆಗಟ್ಟಿದ ದೇವನಗರಿಯ ದೇಗುಲಗಳು

    ದಾವಣಗೆರೆ: ನವರಾತ್ರಿ ಉತ್ಸವಕ್ಕೆ ದಾವಣಗೆರೆಯ ವಿವಿಧ ದೇವಿ ದೇವಸ್ಥಾನಗಳು ಸೋಮವಾರದಿಂದ ಕಳೆಗಟ್ಟಲಿವೆ. ಉತ್ಸವಕ್ಕೆ ಸೆ.26ರಂದು ಚಾಲನೆ ಸಿಗಲಿದೆ. ವಿವಿಧ ಪೂಜೆ, ಹೋಮ, ಅಲಂಕಾರ ನೆರವೇರಲಿದೆ.

    ನಗರ ದೇವತೆ ದುರ್ಗಾಂಬಿಕಾ ಗುಡಿ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸೋಮವಾರ, ದೇವಿಗೆ ಹಂಸ ವಾಹನ ಅಲಂಕಾರ ಮಾಡಲಾಗುವುದು. ಬೆಳಗ್ಗೆ ದೀಪಾರಾಧನೆ, ವಿಘ್ನೇಶರ ಘಟ ಸ್ಥಾಪನೆ, ನವರಾತ್ರಿ, ನವದುರ್ಗಾ, ನವಗ್ರಹ, ದ್ವಾರಪಾಲ, ಕಾಲಭೈರವ ಪೂಜೆ ನಡೆಯಲಿದೆ. ರಾತ್ರಿ 8ಕ್ಕೆ ಶ್ರೀದೇವಿ ಪುರಾಣ ಪ್ರವಚನ ಆರಂಭವಾಗಲಿದೆ.

    ಶಂಕರಮಠ: ಜಯದೇವ ವೃತ್ತದ ಶಂಕರಮಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ವಿಶೇಷವಾಗಿ ಶೈಲಪುತ್ರಿ ಆರಾಧನೆ ನಡೆಯಲಿದೆ. ಬೆಳಗ್ಗೆ ಮಹಾಗಣಪತಿ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ, ಸುಮಂಗಲಿ ಕನ್ನಿಕಾಪೂಜೆ, ಸಂಜೆ 6.30ಕ್ಕೆ ದುರ್ಗಾದೀಪ ನಮಸ್ಕಾರ, ದುರ್ಗಾ ಸಪ್ತಶತಿ ಪಾರಾಯಣ, ದೀಪಾರಾಧನೆ, ಅಷ್ಟಾವಧಾನ ಸೇವೆ ನಡೆಯಲಿದೆ.

    ಕನ್ಯಕಾ ಪರಮೇಶ್ವರಿ ದೇಗುಲ: ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ಅರ್ಧನಾರೀಶ್ವರಿ ಅಲಂಕಾರ ಇರಲಿದೆ. ಸಂಜೆ ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಸ್ವರಮಾಲಿಕೆ ಕಾರ್ಯಕ್ರಮ ಇರಲಿದೆ. ಬೆಳಗ್ಗೆ ವಿಶೇಷ ಪೂಜೆ, ಅಷ್ಟಾವಧಾನ ಇರಲಿದೆ.

    ಕಾಳಿಕಾ ದೇವಸ್ಥಾನ: ಕಾಳಿಕಾದೇವಿ ರಸ್ತೆಯ ಕಾಳಿಕಾದೇವಿ ದೇವಸ್ಥಾನದಲ್ಲಿ ಸೋಮವಾರ ಗಣಪತಿ ಪೂಜೆ ಪುಣ್ಯಾಹವಾಚನ ಘಟ ಸ್ಥಾಪನೆ ಮತ್ತು ಧ್ವಜಾರೋಹಣ ನೆರವೇರಲಿದೆ. ಪಂಚಾಮೃತ ಅಭಿಷೇಕ, ಸಂಜೆ ಕಾಳಿಕಾದೇವಿ ಮಹಿಳಾ ಭಜನಾ ಮಂಡಳಿಯಿಂದ ಲಲಿತಾ ಸಹಸ್ರನಾಮ ಪಾರಾಯಣ, ನಂತರದಲ್ಲಿ ಶ್ರೀದೇವಿ ಪಾರಾಯಣ ಇರಲಿದೆ.

    ಶಂಕರಾಚಾರ್ಯ ದೇಗುಲ: ನಿಜಲಿಂಗಪ್ಪ ಬಡಾವಣೆಯ ಶ್ರೀ ಗಣಪತಿ, ಶಾರದಾಂಬಾ, ಶಂಕರಾಚಾರ್ಯರ ದೇವಸ್ಥಾನದಲ್ಲಿ ಶ್ರೀದೇವಿಗೆ ಹಂಸವಾಹನಾಲಂಕಾರ ಇರಲಿದೆ. ಬೆಳಗ್ಗೆ ನವಗ್ರಹ, ಮೃತ್ಯುಂಜಯ, ದುರ್ಗಾ ಜಪ, ಸಪ್ತಶತಿ ಪಾರಾಯಣ ನಡೆಯಲಿದೆ. ಸಂಜೆ ಶಿವನ ಹಾಡುಗಳು, ಜಗನ್ನಾಥ ನಾಡಿಗೇರ್ ಅವರಿಂದ ಶ್ರೀ ಶಂಕರರ ‘ಮನೀಷಾ ಪಂಚಕ’ ವಿಷಯದ ಉಪನ್ಯಾಸವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts