More

    ಉತ್ತಮ ಜೀವನ ಶೈಲಿಯಿಂದ ಸ್ವಸ್ಥ ಬದುಕು

    ದಾವಣಗೆರೆ : ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಎಸ್.ಎಸ್. ಕೇರ್ ಟ್ರಸ್ಟ್‌ನ ಅಧ್ಯಕ್ಷೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
     ನಗರದ ಎ.ಆರ್.ಜಿ. ಕಾಲೇಜಿನಲ್ಲಿ ಹಮ್ಮಿಕೊಂಡಿರುವ ‘ಎ.ಆರ್.ಜಿ ವೈಭವ’ ಅಂಗವಾಗಿ ಶುಕ್ರವಾರ, ಆರೋಗ್ಯ ಪರಂಪರೆಯ ಆಹಾರ ಮೇಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
     ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಆಧರಿತ ರೋಗಗಳು ಹೆಚ್ಚಾಗುತ್ತಿವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಇನ್ನಿತರ ಕಾಯಿಲೆಗಳು ಸಾಮಾನ್ಯವಾಗಿವೆ. ಆದ್ದರಿಂದ ನಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಬೇಕು. ಉತ್ತಮ ಆಹಾರ ಸೇವನೆ, ದೈಹಿಕ ವ್ಯಾಯಾಮ ಮಾಡಬೇಕು. ಒತ್ತಡದಿಂದ ಮುಕ್ತರಾಗಲು ಯೋಗ, ಪ್ರಾಣಾಯಾಮ, ಧ್ಯಾನದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
     ಟಿವಿ, ಮೊಬೈಲ್‌ಗಳಿಂದ ದೂರವಿರಬೇಕು. ಹಿರಿಯರ ಜತೆಗೆ ಕಾಲ ಕಳೆಯಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಜತೆಗೆ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.
     ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ಭಾಗವಹಿಸಬೇಕು. ನಾಯಕತ್ವ ಗುಣ, ತಾಳ್ಮೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಹಣವೇ ಮುಖ್ಯವಲ್ಲ, ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
     ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, ಪರಿಸರ ನಾಶದಿಂದ ಹವಾಮಾನ ವೈಪರೀತ್ಯಗಳನ್ನು ಕಾಣುತ್ತಿದ್ದೇವೆ. ಬರಗಾಲ, ಮಳೆಯ ಕೊರತೆ, ಗಿಡ ಮರಗಳು ಇಲ್ಲದಂತಾಗಿ ಪಶು-ಪಕ್ಷಿ ಸಂಕುಲಕ್ಕೆ ತೊಂದರೆಯಾಗಿದೆ. ಇದೆಲ್ಲವೂ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
     ಪರಿಸರ, ಆಹಾರ ಮತ್ತು ಸಂಸ್ಕೃತಿಗಳು ಬಹಳ ಮುಖ್ಯ. ಸಾತ್ವಿಕ ಆಹಾರ ಸೇವನೆ ಮಾಡಬೇಕು. ನಾವು ಸೇವಿಸುವ ಆಹಾರ ರುಚಿಕಟ್ಟಾಗಿ ಮಾತ್ರವಲ್ಲ, ಆರೋಗ್ಯಕರವಾಗಿಯೂ ಇರಬೇಕು, ಪೌಷ್ಟಿಕಾಂಶಗಳಿಂದ ಕೂಡಿರಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ SBCs HSBC HSBC ಪ್ರಯತ್ನಿಸಬೇಕು ಎಂದು ತಿಳಿಸಿದರು.ಹವ ಣ
     ಕಾಲೇಜಿನ ಪ್ರಾಚಾರ್ಯ ಡಾ.ಜಿ.ಬಿ. ಬೋರಯ್ಯ ಮಾತನಾಡಿ, ಆಹಾರ ಮೇಳವನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಬಹಳಷ್ಟು ವಿಷಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಮಾರುಕಟ್ಟೆಯ ಸ್ಥಿತಿಗತಿಗಳು ತಿಳಿಯುತ್ತವೆ. ಕೌಶಲಗಳನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದರು.
     ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬೊಮ್ಮಣ್ಣ ಇದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಅನಿತ ಕುಮಾರಿ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ. ಎಚ್.ಆರ್. ತಿಪ್ಪೇಸ್ವಾಮಿ, ಡಾ.ಜೆ.ಕೆ. ಮಲ್ಲಿಕಾರ್ಜುನಪ್ಪ, ಪ್ರೊ.ರಶ್ಮಿ, ಪ್ರೊ. ಆನಂದ್, ರಮೇಶ ಪೂಜಾರ್ ಇದ್ದರು.
     …
     * ಗಮನ ಸೆಳೆದ ಆಹಾರ ಮೇಳ
     ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ 15 ಮಳಿಗೆಗಳನ್ನು ಹಾಕಲಾಗಿತ್ತು. ವಿದ್ಯಾರ್ಥಿಗಳೇ ಬಂಡವಾಳ ಹೂಡಿ ತಯಾರಿಸಿಕೊಂಡು ಬಂದಿದ್ದ ಆಹಾರ ಪದಾರ್ಥಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
     ರೊಟ್ಟಿ, ಪಲ್ಯ, ಚಟ್ನಿಪುಡಿಯಂಥ ಅಪ್ಪಟ ಹಳ್ಳಿ ರುಚಿಯ ಅಡುಗೆ ಪದಾರ್ಥಗಳು, ರಾಗಿ ಹಲ್ವಾ, ಪಲಾವ್, ಲೆಮನ್ ಜ್ಯೂಸ್, ಮಜ್ಜಿಗೆ, ಪಾನಿಪುರಿ, ಫ್ರೂಟ್ ಸಲಾಡ್, ಲಸ್ಸಿ, ಐಸ್‌ಕ್ರೀಂ, ಮಸಾಲೆ ಮಂಡಕ್ಕಿ, ಮಸಾಲೆ ನಿಪ್ಪಟ್ಟು ಬಾಯಲ್ಲಿ ನೀರೂರಿಸುವಂತಿದ್ದವು. ಜತೆಗೆ ಬೆಲ್ಲದ ಪಾನಕ, ಹೆಸರುಕಾಳು ಪಾನಕ, ಕೋಕಂ ಜ್ಯೂಸ್, ನಿಂಬೆ ಜ್ಯೂಸ್‌ನಂಥ ತಂಪು ಪಾನೀಯಗಳೂ ಇದ್ದವು.ವಿಜಯವಾಣಿ ಢ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts