More

    ಸಾಧನೆಯ ಹಾದಿಯಲ್ಲಿ ಸವಾಲು ಎದುರಿಸಿ

    ದಾವಣಗೆರೆ : ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ಕುಗ್ಗದೆ ಸವಾಲುಗಳನ್ನು ಎದುರಿಸಿ ಮುನ್ನಡೆದರೆ ಯಾವುದೇ ಸಾಧನೆ ಕೈಗೊಳ್ಳಬಹುದು ಎಂದು ಕೆನಡಾ ದೇಶದ ಉದ್ಯೋಗಿ ಹಾಗೂ ಸಂಪನ್ಮೂಲ ವ್ಯಕ್ತಿ ಎಸ್.ವೇಣುಗೋಪಾಲ್ ತಿಳಿಸಿದರು.
     ನಗರದ ಜಿಎಂಐಟಿ ಎಂಬಿಎ ವಿಭಾಗದಲ್ಲಿ ಶುಕ್ರವಾರ ಕೆನಡಾದಲ್ಲಿ ಉದ್ಯೋಗವಕಾಶಗಳು ಮತ್ತು ಸವಾಲುಗಳು ಎಂಬ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
     ಪ್ರಸ್ತುತ ಸಾಗರೋತ್ತರ ಉದ್ಯೋಗಾವಕಾಶಗಳು ಲಭ್ಯವಿದ್ದು, ಆತ್ಮವಿಶ್ವಾಸ, ಸಂವಹನ ಕೌಶಲ, ಕೈಗಾರಿಕಾ ಕೌಶಲ ಮತ್ತು ದೃಢ ನಿರ್ಧಾರ ಹೊಂದಿದ್ದರೆ ಯಾವುದೇ ದೇಶದಲ್ಲಿ ಶಾಂತಿ ಮತ್ತು ಸುಖಜೀವನ ನಡೆಸಬಹುದಾಗಿದೆ ಎಂದರಲ್ಲದೆ, ಕೆನಡಾ ದೇಶದಲ್ಲಿ ಉದ್ಯೋಗಕ್ಕಾಗಿ ತಾವು ಎದುರಿಸಿದ ಸವಾಲುಗಳನ್ನು ವಿವರಿಸಿದರು.
     ಎಂಬಿಎ ವಿಭಾಗದ ನಿರ್ದೇಶಕ ಡಾ.ಬಿ.ಬಕ್ಕಪ್ಪ ಮಾತನಾಡಿ ಮುಂಬರುವ ದಿನಗಳಲ್ಲಿ ವಿದೇಶಿ ವಿಶ್ವವಿದ್ಯಾಲಯಗಳೊಡನೆ ಒಡಂಬಡಿಕೆ ಮೂಲಕ ಹಲವು ಕಾರ್ಯಕ್ರಮ ರೂಪಿಸುತ್ತಿದ್ದು ಸಾಗರೋತ್ತರ ಉದ್ಯೋಗವಕಾಶಗಳಿಗೆ ಹೆಚ್ಚಿನ ಪುಷ್ಟಿ ಸಿಗಲಿದೆ ಎಂದು ತಿಳಿಸಿದರು.
     ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನ್ ಮತ್ತು ಇನ್ಫಾರ್ಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.
     ಸುನಿಲ್ಕುಮಾರ್ ಇದ್ದರು. ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್. ಬಸವರಾಜು ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts