More

    ಪದವಿಪೂರ್ವ ಭವಿಷ್ಯ ನಿರ್ಮಾಣದ ಪರ್ವಕಾಲ

    ದಾವಣಗೆರೆ : ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣಾವಧಿಯನ್ನು ಗೊಂದಲದ ಗೂಡೆಂದು ಭಾವಿಸಬಾರದು, ಭವಿಷ್ಯ ನಿರ್ಧಾರ ಕೈಗೊಳ್ಳುವ ಪರ್ವಕಾಲವೆಂದು, ಪರಿಶ್ರಮದಿಂದ ಓದಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಸದಸ್ಯ ಡಾ.ಸಂಪನ್ನ ಮುತಾಲಿಕ್ ದೇಸಾಯಿ ಅಭಿಪ್ರಾಯ ಪಟ್ಟರು.
     ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ವೇದಿಕೆ ಮತ್ತು  ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,
     ಇತ್ತೀಚೆಗೆ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಉದ್ಯೋಗ ಅವಕಾಶ ಇರುವ ಅನೇಕ ಪದವಿಗಳೂ ಇದ್ದು ಅವುಗಳಲ್ಲಿ ಸಕ್ಕರೆ ಉದ್ಯಮಕ್ಕೆ ಸಂಬಂಧಪಟ್ಟ ಪದವಿ ಒಂದಾಗಿದೆ, ಎಥನಾಲ್ ಸಂಯುಕ್ತ ಇಂಧನದ ಬಳಕೆ ರೂಢಿಗೆ ಬರುತ್ತಿದ್ದು, ಸಕ್ಕರೆ ಕೈಗಾರಿಕೋದ್ಯಮ ಮತ್ತು ಎಥೆನಾಲ್ ಉತ್ಪಾದನೆಗೂ ಸಂಬಂಧವಿದೆ. ರಾಜ್ಯದಲ್ಲೇ  75ಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳಿವೆ ಹಾಗಾಗಿ ಈ ಕೋರ್ಸ್ ಮಾಡಿದವರಿಗೆ ಉದ್ಯೋಗ ಅವಕಾಶಗಳು ಹೇರಳವಾಗಿವೆ ಎಂದು ಹೇಳಿದರು.
      ಮಕ್ಕಳು ಸೋಲಿನ ಬಗೆಗೆ ಕುಗ್ಗದೆ ಗೆಲುವಿನ ಧೈರ್ಯವಂತರಾಗಿ ಛಲದಿಂದ ಮುನ್ನಡೆದರೆ ಯಶಸ್ಸು ಸಾಧ್ಯ.ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಡಳಿತ ಮಂಡಳಿಗೆ ಪ್ರಸ್ತಾಪಿಸುವುದಾಗಿ ಹೇಳಿದರು.
     ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ್ ಮಾತನಾಡಿ, ಮಕ್ಕಳು ಸದೃಢ ಮನಸ್ಥಿತಿಯಿಂದ ಎಲ್ಲವನ್ನೂ ಜಯಿಸಬಹುದು. ಸ್ವತಂತ್ರ ಆಲೋಚನಾ ಶಕ್ತಿಯಿಂದ ಸ್ವಯಂ ಅಭ್ಯಾಸ ಮಾಡುವ ಹವ್ಯಾಸ ಬೆಳಿಸಿಕೊಳ್ಳಬೇಕು. ಪರೀಕ್ಷೆಗೆ ಹೆದರದೆ ಆಸಕ್ತಿಯಿಂದ ಓದಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಅಭಿವೃದ್ಧಿಯ ಪಥದಲ್ಲಿರುವ ಭಾರತಕ್ಕೆ, ವಿದ್ಯಾರ್ಥಿಗಳ ಕೊಡುಗೆ ಸಾಧಕ ರೂಪದಲ್ಲಿ ಬೇಕಾಗಿದೆ ಎಂದು ಹೇಳಿದರು.
     ಹಳೇ ವಿದ್ಯಾರ್ಥಿಗಳಾದ ತಾಂತ್ರಿಕ ಅಭಿಯಂತರ ಎಚ್.ಬಿ. ಅಭಿಲಾಶ್ ಮತ್ತು ಅರಣ್ಯಾಧಿಕಾರಿ ಮೊಹಮ್ಮದ್ ಖಾಲಿದ್ ಮುಸ್ತಾಬ್ ಅವರನ್ನು ಸನ್ಮಾನಿಸಿದರು. ಸಹನಾ ಮತ್ತು ರುಕ್ಮಿಣಿ ನಿರೂಪಣೆ ಮಾಡಿದರು. ಅಭಿಲಾಶ್ ಸ್ವಾಗತ ಮಾಡಿದರು. ಬೋಧಕ ವರ್ಗದ ಕೆ ಸಿ ಶಿವಶಂಕರ್, ಎಚ್.ಜಿ. ಚೇತನ್, ಕೆ.ಸಿ. ಶ್ರುತಿ, ಟಿ.ಎಂ. ಗಗನ್, ಎನ್.ಕೆ. ರವಿ, ಬಿ.ಎಂ. ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts