More

    ‘ಚಂದ್ರದ್ರೋಣ ಪರ್ವತದ ದತ್ತಾತ್ರೇಯ ಶಾಪ ಸಿಎಂ ಬಿಎಸ್‌ವೈಗೆ ಕಾಡುತ್ತಿದೆ’

    ದಾವಣಗೆರೆ: ಚಂದ್ರದ್ರೋಣ ಪರ್ವತದ ದತ್ತಾತ್ರೇಯ ಶಾಪ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕಾಡುತ್ತಿದೆ ಎಂದು ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.

    ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಕರ್ಣಿ ಅವರು ಚಂದ್ರದ್ರೋಣ ಪರ್ವತದ ದತ್ತಾತ್ರೇಯ ಶಾಪದಿಂದಾಗಿ ಬಿಎಸ್‌ವೈ ಮೂರು ಬಾರಿ ಸಿಎಂ ಆದ್ರೂ, ಅಧಿಕಾರ ಪೂರ್ಣಗೊಳಿಸಿಲ್ಲ. ದತ್ತಪೀಠದ ಹೋರಾಟದ ಆರಂಭದಲ್ಲಿ ಸಿಎಂ ಯಡಿಯೂರಪ್ಪ ಸಹ ಭಾಗವಹಿಸಿದ್ದರು. ಅಂದು, ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ದತ್ತಪೀಠ ವಿಮೋಚನೆ ಮಾಡುವ ಭರವಸೆ ನೀಡಿದರು. ಈಗಾಗಲೇ, ಸಿಎಂ ಗಾದಿಗಾಗಿ ಆಂತರಿಕ ಗುದ್ದಾಟ ಆರಂಭವಾಗಿದೆ. ಇನ್ನಾದರೂ, ಸಿಎಂ ಬಿಎಸ್‌ವೈ ದತ್ತಪೀಠ ವಿಮೋಚನೆ ಆದೇಶ ಹೊರಡಿಸಲಿ, ದತ್ತಪೀಠದ ಅಭಿಯಾನದಲ್ಲಿ ಭಾಗವಹಿಸಿ ಪಾಪದಿಂದ ಮುಕ್ತರಾಗಲಿ ಬಿಎಸ್‌ವೈ ಅವರನ್ನು ದತ್ತಪೀಠದ ಅಭಿಯಾನಕ್ಕೆ ಆಹ್ವಾನಿಸುತ್ತೇವೆ ಎಂದು ಹೇಳಿದರು.

    ಇದನ್ನೂ ಓದಿ: ಮಗಳ ಮದುವೆ ನಿಶ್ಚಿತಾರ್ಥದ ಖುಷಿಯಲ್ಲಿದ್ದ ಡಿಕೆಶಿಗೆ ಮತ್ತೊಂದು ಶಾಕ್​!

    ಮಸೀದಿಗಳಲ್ಲಿನ ಮೈಕ್‌ ತೆರವಿಗೆ ಆಗ್ರಹ
    ಇದೇ ವೇಳೆ ಮಸೀದಿಗಳಲ್ಲಿ ಅಳವಡಿಸಿರುವ ಮೈಕ್‌ ಕುರಿತು ಮಾತನಾಡಿ, ಮೈಕ್​ ವಿರುದ್ಧ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸುಪ್ರಿಂಕೋರ್ಟ್‌ನ ಆದೇಶವೂ ಇದಕ್ಕೆ ಪೂರಕವಾಗಿ ಬಂದಿದೆ. ರಾಜ್ಯದ ಪೊಲೀಸ್‌ ಐಜಿ ಅವರು ಧ್ವಂಧ್ವ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ದಾವಣಗೆರೆಯ ಮಸೀದಿಗಳ ಮೈಕ್‌ಗಳನ್ನು ತೆರವುಗೊಳಿಸಬೇಕು. ಡಿಸೆಂಬರ್‌ 2ನೇ ವಾರದವರೆಗೆ ಗಡುವು ನೀಡಲಾಗುವುದು. ಅನಧಿಕೃತ ಮೈಕ್‌ ತೆರವುಗೊಳಿಸದಿದ್ದರೆ, ಮಸೀದಿಗಳ ಎದುರು ಪ್ರತಿಭಟನೆ ನಡೆಸಲಾಗುವುದು. ಡಿ.2 ರಂದು ವಿನೋಬಾನಗರ ಮಸೀದಿಯಿಂದ ಹೋರಾಟ ಆರಂಭ ಮಾಡಲಾವುದು ಎಂದು ಕುಲಕರ್ಣಿಯವರು ಎಚ್ಚರಿಸಿದರು.

    ಮರಾಠ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ವಿರೋಧ ಬೇಡ. ಭಾಷೆ ಹಾಗೂ ಜನಾಂಗದ ಮಧ್ಯೆ ಇರುವ ವ್ಯತ್ಯಾಸ ಅರ್ಥ ಮಾಡಿಕೊಳ್ಳಿ. ತುಳಿತಕ್ಕೊಳಗಾದ ಎಲ್ಲರಿಗೂ ಅಭಿವೃದ್ಧಿ ಹೊಂದಲು ಅವಕಾಶ ಅಗತ್ಯವಾಗಿದೆ. ಸಮಾಜದ ಮಧ್ಯೆ ದ್ವೇಷ ಬಿತ್ತುವ ಕಾರ್ಯ ನಡೆಯಬಾರದು. ಮರಾಠ ಅಭಿವೃದ್ಧಿ ಮಂಡಳಿ ಸ್ಥಾಪನೆಯನ್ನು ನಾವು ಸ್ವಾಗತಿಸುತ್ತೇವೆ ಎಂದರು.

    ನ್ಯಾಯ ಬೇಡಿ ಮನೆ ಬಾಗಿಲಿಗೆ ಬಂದ ಶಾಸಕನಿಗೆ ಶಿಸ್ತು ಸಮಿತಿಯತ್ತ ಬೆರಳು ತೋರಿಸಿ ಡಿಕೆಶಿ ಎಸ್ಕೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts