More

    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ  ಸ್ವಚ್ಛ ಭಾರತ ಅಭಿಯಾನ

    ದಾವಣಗೆರೆ : ಮಹಾತ್ಮ ಗಾಂಧೀಜಿ ಅವರ 155ನೇ ಜನ್ಮದಿನದ ನೆನಪಿಗಾಗಿ ಪ್ರಧಾನಮಂತ್ರಿ ಆಶಯದಂತೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾನುವಾರ  ಶ್ರಮದಾನದ ಮೂಲಕ ಸ್ವಚ್ಛ ಭಾರತ ಅಭಿಯಾನ ಆಚರಿಸಿದರು.
     ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನದ ಮೇರೆಗೆ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಛ ಭಾರತ ಅಭಿಯಾನದ  ಧ್ಯೇಯವಾಕ್ಯ ’ಕಸಮುಕ್ತ ಭಾರತ -2023ರ ಪ್ರಮಾಣ ವಚನದ ಪ್ರತಿಜ್ಞೆ ಸ್ವೀಕರಿಸಿ ಕಾಲೇಜು ಆವರಣ ಸ್ವಚ್ಛಗೊಳಿಸಿದರು.
     ನಂತರ ಘೋಷಣೆ ಕೂಗುತ್ತಾ ಸಾಲಾಗಿ ಹೊರಟ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಂಗಣ ತಲುಪಿದರು. ಅಲ್ಲಿ ಬಿದ್ದಿದ್ದ ಕಸಕಡ್ಡಿ ಆರಿಸಿ ನೆರೆದಿದ್ದ ಜನತೆಗೆ ಸ್ವಚ್ಛತೆ ಅರಿವು ಮೂಡಿಸಿದರು. ಗಾಂಧೀಜಿ ಅವರ ಸ್ವಚ್ಛತೆಯೇ ಸೇವೆ ಎಂಬ ಪರಿಕಲ್ಪನೆ ಸಾಕಾರಗೊಳಿಸುವ ಪ್ರತಿಜ್ಞೆ ಮಾಡಿದರು.
     ವಾರಕ್ಕೆ ಎರಡು ಗಂಟೆ ಮತ್ತು ವರ್ಷಕ್ಕೆ 100 ಗಂಟೆ ಸ್ವಚ್ಛತೆಗಾಗಿ ಮೀಸಲಿಡುವ ಮೂಲಕ ಕಸಮುಕ್ತ ಭಾರತದ ಕನಸನ್ನು ಸಾಧಿಸುವುದಾಗಿ ಪಣತೊಟ್ಟ ವಿದ್ಯಾರ್ಥಿಗಳು ಲವಲವಿಕೆಯಿಂದ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ.ಜಿ.ಆರ್. ನಟರಾಜ್ ಕಾರ್ಯಕ್ರಮ ಆಯೋಜಿಸಿದ್ದರು. ಪ್ರಾಚಾರ್ಯ ದಾದಾಪೀರ್ ನವಿಲೇಹಾಳ್ ಕಸಮುಕ್ತ ಭಾರತದ ಪ್ರಮಾಣ ವಚನ ಬೋಧಿಸಿದರು.
     ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಪ್ರೊ.ಗುರುದೇವ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕ ಡಾ.ಕರಿಬಸಪ್ಪ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಎಂ.ಆರ್. ರೇಖಾ, ಪ್ರಾಧ್ಯಾಪಕರಾದ ಬಿ.ಸಿ. ತಹಶೀಲ್ದಾರ್, ಕೆ.ವಿ. ಬಸವರಾಜ್, ಕೆ.ಎಂ. ರುದ್ರಪ್ಪ, ಎಸ್.ಆರ್. ಅಂಜನಪ್ಪ , ಟಿ. ಮಂಜಣ್ಣ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts