More

    ಮಕ್ಕಳಿಗೆ ಬೇಕು ಭಾವನಾತ್ಮಕ ಸಂಬಂಧ

    ದಾವಣಗೆರೆ : ಬಾಲ್ಯ ವಿವಾಹ ಪ್ರಕರಣಗಳ ಹಿಂದೆ ಹಲವು ಸಾಮಾಜಿಕ, ಆರ್ಥಿಕ ಕಾರಣಗಳಿವೆ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
     2018-19ನೇ ಸಾಲಿನಿಂದ 2023ರ ಫೆಬ್ರವರಿ ಅಂತ್ಯದ ವರೆಗೆ ಬಾಲ್ಯ ವಿವಾಹ ಪ್ರಕರಣಗಳ 336 ದೂರುಗಳು ಬಂದಿವೆ. ಅವುಗಳಲ್ಲಿ 316 ಅನ್ನು ತಡೆಯಲಾಗಿದೆ. 20 ಬಾಲ್ಯ ವಿವಾಹಗಳು ನಡೆದಿದ್ದು ಆ ಬಗ್ಗೆ ಎಫ್.ಐ.ಆರ್ ದಾಖಲಾಗಿವೆ.
     ಈ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶ್ಲೇಷಣೆಯಲ್ಲಿ ತೊಡಗಿದರು. ಒಂದೊಂದು ಕುಟುಂಬದಲ್ಲಿ ಒಂದೊಂದು ಕಾರಣಗಳಿದ್ದವು. ಅವುಗಳನ್ನು ಕೆದಕುತ್ತಾ ಹೋದಂತೆ ಕೌಟುಂಬಿಕ ವಿಚಾರಗಳು, ಆರೋಗ್ಯ ಸಂಬಂಧಿ ಸಂಗತಿಗಳು ತೆರೆದುಕೊಳ್ಳುತ್ತಾ ಹೋದವು.
     ಬಾಲ್ಯ ವಿವಾಹ ತಡೆಗಟ್ಟಲಾದ 316 ಪ್ರಕರಣಗಳ ಪೈಕಿ 94 ರಲ್ಲಿ ಬಾಲಕಿಯರು ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಮನೆ ಬಿಟ್ಟು ಹೋಗಬಹುದು ಎಂಬ ಭಯದಿಂದ ಪಾಲಕರು ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದು ಕಂಡುಬಂದಿತು. 174 ಪ್ರಕರಣಗಳಲ್ಲಿ ಆರ್ಥಿಕ ಸಂಕಷ್ಟ, ಕುಟುಂಬದ ಸದಸ್ಯರ ಅನಾರೋಗ್ಯ, ಮಕ್ಕಳ ಪಾಲಕರು ಮರಣ ಹೊಂದಿ ಇನ್ನೊಬ್ಬರ ಆಶ್ರಯದಲ್ಲಿ ಬೆಳೆಯುತ್ತಿರುವ ಕಾರಣ ಮದುವೆಗೆ ಸಿದ್ಧತೆ ನಡೆದಿರುವುದು ಬೆಳಕಿಗೆ ಬಂದಿತು.
     ಇನ್ನು 43 ಪ್ರಕರಣಗಳಲ್ಲಿ ಆರ್ಥಿಕವಾಗಿ ಸಬಲರಾಗಿದ್ದರೂ ಒಳ್ಳೆಯ ಸಂಬಂಧ ಬಂದಿದೆ ಎಂದು ಪಾಲಕರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದು ತಿಳಿದು ಬಂದಿತು. 5 ಪ್ರಕರಣಗಳಲ್ಲಿ ಪಾಲಕರಿಗೆ ಬಾಲ್ಯ ವಿವಾಹದ ಕಾನೂನಿನ ಅರಿವು ಇರಲಿಲ್ಲ.
     ಬಾಲ್ಯ ವಿವಾಹ ನಡೆದ ಒಟ್ಟು 20 ಪ್ರಕರಣಗಳ ಪೈಕಿ 2 ರಲ್ಲಿ ಬಾಲಕಿಯರು ಪ್ರೇಮಕ್ಕೆ ಸಿಲುಕಿ ಮನೆ ಬಿಟ್ಟು ಹೋಗಬಹುದು ಎಂಬ ಆತಂಕದಿಂದ ಪಾಲಕರು ಮದುವೆ ಮಾಡಿದ್ದಾರೆ. 3 ಪ್ರಕರಣಗಳಲ್ಲಿ ಅಪ್ರಾಪ್ತ ಬಾಲಕಿಯರೇ ಪಾಲಕರಿಗೆ ತಿಳಿಸದೆ ಸ್ವಂತ ನಿರ್ಧಾರದಿಂದ ಮದುವೆಯಾಗಿದ್ದಾರೆ.
     ಹನ್ನೊಂದು ಪ್ರಕರಣಗಳಲ್ಲಿ ಕೌಟುಂಬಿಕ ಕಾರಣಗಳಿವೆ. 4 ಕೇಸ್‌ಗಳಲ್ಲಿ ಆರ್ಥಿಕವಾಗಿ ಸಬಲರಾಗಿದ್ದರೂ ಒಳ್ಳೆಯ ಸಂಬಂಧ ಬಂದಿದೆ ಎಂಬ ಕಾರಣಕ್ಕೆ ಮದುವೆ ಮಾಡಲಾಗಿದೆ.
     …
     (ಕೋಟ್)
     ಮಕ್ಕಳಿಗೆ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗಿವೆ. ಪಾಲಕರು ಮಕ್ಕಳ ಜತೆಗೆ ಹೆಚ್ಚು ಸಮಯ ಕಳೆಯಬೇಕು. ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ಮದುವೆ ಮಾಡುವುದರಿಂದ ಅವರ ಭವಿಷ್ಯ ಛಿದ್ರವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಅವರು ಸ್ವಾವಲಂಬಿಗಳಾಗುವಂತೆ ಮಾಡಬೇಕು.
      ವಾಸಂತಿ ಉಪ್ಪಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts