More

    ಭಾರತ ವಿಶ್ವ ಗುರುವಾಗಲು ಬೇಕು ಯುವಶಕ್ತಿ ಬಲ

    ದಾವಣಗೆರೆ: ಯುವಕರಲ್ಲಿ ಭಾರತೀಯತೆ, ಸಂಸ್ಕೃತಿ ಮತ್ತಷ್ಟು ಜಾಗೃತವಾದಲ್ಲಿ ಭಾರತ ವಿಶ್ವಗುರು ಆಗುವಲ್ಲಿ ಅನುಮಾನವಿಲ್ಲ. ಯುವ ಶಕ್ತಿ ಈ ದಿಕ್ಕಿನತ್ತ ಸಾಗಬೇಕಿದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

    ಯುವ ಬ್ರಿಗೇಡ್ ದಾವಣಗೆರೆ ಹಾಗೂ ಎ.ಕೆ.ಫೌಂಡೇಶನ್ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

    ನಮ್ಮ ಯುವಕರಲ್ಲಿ ಅಮೆರಿಕ, ಇಂಗ್ಲೆಂಡ್ ಆಹಾವನೆ ಆಗಲಿಲ್ಲ. ಏಕೆಂದರೆ ಅವರ ರಕ್ತದ ಕಣಕಣದಲ್ಲಿ ನಮ್ಮದೇ ಭಾರತ ಇದೆ. ಕಾಟಾಚಾರಕ್ಕಾಗಿ ಓದು, ಬರಹದಲ್ಲಿ ತೊಡಗದೆ ಅಮೂಲ್ಯ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದೇಶಕ್ಕಾಗಿ ಯುವ ಶಕ್ತಿ ಬಲಾಢ್ಯವಾಗಬೇಕು ಎಂದರು.

    ಯುವಶಕ್ತಿಯಲ್ಲಿ ದೇಶಕ್ಕಾಗಿ ಏನನ್ನಾದರೂ ಕೊಡಬೇಕೆಂಬ ತುಡಿತ ಇರಬೇಕು. 14ನೇ ವಯಸ್ಸಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿ ಸ್ಥಾಪಿಸಿ, 18ನೇ ವಯಸ್ಸಿನಲ್ಲಿ ಭಾರತವನ್ನು 54 ವಿದೇಶಿ ಶಾಖೆಗಳ ಪ್ರಧಾನ ಕೇಂದ್ರವಾಗಿ ಮಾಡಿದ ಉದ್ಯಮಿ ಸುಹಾಸ್ ಗೋಪಿನಾಥ್ ಎನ್ನುತ್ತ ಉದಾಹರಣೆ ನೀಡಿ, ರಾಷ್ಟ್ರೀಯತೆಯ ತುಡಿತವಿದ್ದರೆ ನಮ್ಮ ಜತೆಗೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಬಹುದು ಎಂದರು.

    ರೋಲ್‌ಮಾಡೆಲ್ ಫಾಲೋ ಆಗುತ್ತಿಲ್ಲ: ಭಾರತದಲ್ಲಿ ಅನೇಕ ರೋಲ್‌ಮಾಡೆಲ್‌ಗಳಿದ್ದರೂ ಅವರನ್ನು ಫಾಲೋ ಮಾಡುತ್ತಿಲ್ಲ. ದಡ್ಡರ, ದರಿದ್ರರ ರಾಷ್ಟ್ರ ಎಂದು ಕರೆಸಿಕೊಳ್ಳುತ್ತಿದ್ದ ಭಾರತವನ್ನು ಜಗತ್ತು ನೋಡುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಕರೊನಾ ಕಾಲದಲ್ಲಿ ಲಸಿಕೆ ಕಂಡುಹಿಡಿದ ಐದನೇ ರಾಷ್ಟ್ರವಾದರೂ, ಬಡ ರಾಷ್ಟ್ರಗಳಿಗೆ ವ್ಯಾಕ್ಸಿನ್ ಅನ್ನು ಉಚಿತವಾಗಿ ನೀಡಿ ಇತರರೂ ಬದುಕಬೇಕು ಎಂಬುದನ್ನು ಕಲಿಸಿದ್ದು ಭಾರತ ಎಂದು ಹೇಳಿದರು.

    ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷ ಶ್ರೀ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಎ.ಕೆ. ಫೌಂಡೇಶನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್ ಮಾತನಾಡಿ ಎಲ್ಲರನ್ನೂ ನಿರಂತರವಾಗಿ ಪ್ರೀತಿಸುವ ಗುಣ, ಹಿರಿಯರಲ್ಲಿ ಗೌರವ ಭಾವನೆ ಇಂದಿನ ಯುವ ಸಮೂಹಕ್ಕೆ ಬೇಕು. ನಾವು ಶಿಕ್ಷಣ, ವಿಜ್ಞಾನದಷ್ಟೆ ಸಾಮಾಜಿಕ, ಸಾಂಸ್ಕೃತಿಕ ಇನ್ನಿತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ ಎಂದರು. ಸ್ವಾತಂತ್ರೃ ಹೋರಾಟಗಾರರಾದ ಎಚ್. ಮರುಳಸಿದ್ದಪ್ಪ ಹಾಗೂ ಬಿ. ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts