More

    ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ಕೆ ಚಾಲನೆ

    ದಾವಣಗೆರೆ : ಹಸಿದವರು ಹಾಗೂ ದಣಿವಾಗಿ ಬಂದವರಿಗೆ ಆಹಾರ, ಮಜ್ಜಿಗೆ ಹಾಗೂ ನೀರು ಕೊಟ್ಟರೆ ದೇವರು ಸಂತೃಪ್ತನಾಗುತ್ತಾನೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
     ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಗರದ ಜಯದೇವ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಮಜ್ಜಿಗೆ ಮತ್ತು ನೀರು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
     ಜನ ಕಾಣದ ದೇವರನ್ನು ಹುಡುಕಿಕೊಂಡು ಹೋಗಿ ಎಳನೀರು, ಬೆಣ್ಣೆ, ತುಪ್ಪ ಅಭಿಷೇಕ ಮಾಡುವ ಮೂಲಕ ಆಹಾರ ಪದಾರ್ಥ ವ್ಯರ್ಥ ಮಾಡುತ್ತಾರೆ. ಆದರೆ, ಅದೇ ಆಹಾರವನ್ನು ಹಸಿದವರು, ಬಡವರು ಹಾಗೂ ಅಸಹಾಯಕರಿಗೆ ನೀಡಿದರೆ ಅದು ದೇವರಿಗೆ ನೀಡಿದಂತೆ ಎಂದು ತಿಳಿಸಿದರು.
     ಉಳ್ಳವರು ಹಣ ಕೊಟ್ಟು ತಂಪು ಪಾನೀಯ ಕುಡಿಯುತ್ತಾರೆ. ಆದರೆ, ಬಡವರಿಗಾಗಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಉಚಿತ ಮಜ್ಜಿಗೆ ವಿತರಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
     ಪ್ರೊ.ಎಂ. ಬಸವರಾಜ್ ಮಾತನಾಡಿ, ಜನ ಯಾವಾಗಲೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಬಾಳಬೇಕೆಂದರೆ ಉಳ್ಳವರು ಇಲ್ಲದವರಿಗೆ ನೆರವಾಗಬೇಕು ಎಂದು ತಿಳಿಸಿದರು.
     ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಪ್ರಸಕ್ತ ವರ್ಷ ವಿಪರೀತ ಬಿಸಿಲು ಇರುವ ಕಾರಣ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣದಿಂದ ಬ್ರೈನ್ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು. ಅಂತಹವರಿಗೆ ಮಜ್ಜಿಗೆ, ನೀರಿನ ಅವಶ್ಯಕತೆಯಿದೆ. ಹಾಗಾಗಿ, ಕಳೆದ 8 ವರ್ಷಗಳಿಂದ ಉಚಿತ ಸೇವೆ ಒದಗಿಸಲಾಗುತ್ತಿದೆ ಎಂದರು.
     ಟ್ರಸ್ಟ್‌ನ ಮಂಜುಳಾ ಬಸವಲಿಂಗಪ್ಪ, ದಾನಿಗಳಾದ ಮಂಜುಳಾ ಸಿದ್ದಪ್ಪ, ರೇಖಾ ಸುದರ್ಶನ್, ನಿರ್ದೇಶಕ ಮಧುಸೂದನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts