More

    ಭಯೋತ್ಪಾದಕರ ಮಟ್ಟ ಹಾಕಲು ಮೋದಿ ಮತ್ತೆ ಆಗಲಿ ಪ್ರಧಾನಿ

    ದಾವಣಗೆರೆ : ದೇಶದಲ್ಲಿ ಜಿಹಾದಿಗಳು ಹಾಗೂ ಭಯೋತ್ಪಾದಕರನ್ನು ಹತ್ತಿಕ್ಕಲು ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹೇಳಿದರು.
     ನಗರದ ಟಿವಿ ಸ್ಟೇಷನ್ ಪಾರ್ಕ್, ಡಿಸಿಎಂ ಟೌನ್‌ಶಿಪ್‌ನ ರಾಜನಹಳ್ಳಿ ಹನುಮಂತಪ್ಪ ಪಾರ್ಕ್, ಜಯನಗರ ಉದ್ಯಾನವನ, ಸ್ವಾಮಿ ವಿವೇಕಾನಂದ ಪಾರ್ಕ್, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣ, ಇಂಡಿಯನ್ ಕಾಫಿ ಬಾರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ಮತಯಾಚಿಸಿ ಮಾತನಾಡಿದರು.
     ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಜಿಹಾದಿಗಳು ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಭಯೋತ್ಪಾದಕರು ಹೆಚ್ಚಾಗುತ್ತಾರೆ. ಸಾಮಾನ್ಯ ಜನರಿಗೂ ರಕ್ಷಣೆ ಇಲ್ಲದಂತಾಗುತ್ತದೆ ಎಂದು ದೂರಿದರು.
     ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 10 ವರ್ಷ ಆಗಿದ್ದು, ಭಯೋತ್ಪಾದಕರು ದೇಶ ಬಿಟ್ಟು ಹೋಗಿದ್ದಾರೆ.  ದೇಶಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಹೆಡೆಮುರಿ ಕಟ್ಟುವಲ್ಲಿ ಮೋದಿಯವರು ಯಶಸ್ವಿಯಾಗಿದ್ದಾರೆ. ಅಂತಹ ದೇಶ ರಕ್ಷಕರು ಇನ್ನೊಮ್ಮೆ ಪ್ರಧಾನಿ ಆಗಬೇಕು ಎಂದರು.
     ದೇಶದಲ್ಲಿ ನರೇಂದ್ರ ಮೋದಿ ಅವರ ಆಡಳಿತ, ಕ್ಷೇತ್ರದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮನಗಂಡು ಮತದಾರರು ದೇಶಕ್ಕೆ ಮೋದಿ, ದಾವಣಗೆರೆಗೆ ಗಾಯತ್ರಿ ಸಿದ್ದೇಶ್ವರ್ ಎಂದು ತೀರ್ಮಾನ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ ನಮ್ಮ ಗೆಲುವಿನ ದಿಕ್ಸೂಚಿ ಎಂದು ತಿಳಿಸಿದರು.
     ನಾನು ಹಾಗೂ ನನ್ನ ಪತಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಸದಾ ಜನರಿಗೆ ಸುಲಭವಾಗಿ ಸಿಗುವವರಾಗಿದ್ದು, ಯಾರೂ ಬೇಕಿದ್ದರೂ ಮಾತಾಡಿಕೊಂಡು ಹೋಗಬಹುದು. ನಮ್ಮನ್ನು ಮಾತನಾಡಿಸಲು ಯಾವುದೇ ಅಡ್ಡಿ-ಆಂತಕ ಇಲ್ಲ ಎಂದು ಹೇಳಿದರು.
     ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಕಮಲಾ ನಿರಾಣಿ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಹೇಮಂತ್‌ಕುಮಾರ್, ವೀರೇಶ್, ಬಿಜೆಪಿ ಮುಂಖಡರು ಹಾಗೂ ಕಾರ್ಯಕರ್ತರು ಇದ್ದರು.
     —-
     ಚಿತ್ರ : ಡಿವಿಜಿ ಗಾಯತ್ರಿ 20
     ದಾವಣಗೆರೆ ನಗರದ ವಿವಿಧೆಡೆ ಶನಿವಾರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ ಮಾಡಿದರು. ಶ್ರೀನಿವಾಸ ದಾಸಕರಿಯಪ್ಪ, ಕಮಲಾ ನಿರಾಣಿ, ಎಸ್.ಟಿ.ವೀರೇಶ್, ಹೇಮಂತ್‌ಕುಮಾರ್ ಇತರರು ಇದ್ದರು.
     —-
     ಕೆರೆ ತುಂಬಿಸುವ ಯೋಜನೆ ಜಾರಿಯಲ್ಲಿ ಬಿಜೆಪಿಯದೆ ಸಿಂಹಪಾಲು
      ಮಾಜಿ ಶಾಸಕರಾದ ಎಸ್.ವಿ.ಆರ್, ರಾಜೇಶ್ ಹೇಳಿಕೆ
     ದಾವಣಗೆರೆ: ಜಗಳೂರು ತಾಲೂಕಿನ 57 ಕೆರೆ ತುಂಬಿಸುವ ಯೋಜನೆಯ ಅನುಷ್ಠಾನದಲ್ಲಿ ಬಿಜೆಪಿಯದೇ ಸಿಂಹಪಾಲಿದೆ ಎಂದು ಕ್ಷೇತ್ರದ ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಮತ್ತು ಎಚ್.ಪಿ. ರಾಜೇಶ್ ಹೇಳಿದರು.
     ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ತಂದಿದ್ದು ಕಾಂಗ್ರೆಸ್ ಎಂದು ಆ ಪಕ್ಷದವರು ಹೇಳುತ್ತಿದ್ದಾರೆ. ಅದು ಸರಿಯಲ್ಲ, ಹೆಚ್ಚಿನ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ ಎಂದು ತಿಳಿಸಿದರು.
     ಯೋಜನೆಗೆ ಅನುಮೋದನೆ ನೀಡಿದ್ದು ಕಾಂಗ್ರೆಸ್ ಇರಬಹುದು, ಆದರೆ ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಅನುದಾನ ಬಿಡುಗಡೆ ಮಾಡಿದರು. ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪ್ರಯತ್ನವೂ ಸೇರಿದೆ. ಈ ಯೋಜನೆಗಾಗಿ ಸಾಕಷ್ಟು ಹೋರಾಟಗಳು ನಡೆದಿದ್ದವು. ನೀರು ಕಾಣದ ಪ್ರದೇಶದಲ್ಲಿ ಈ ಮಹತ್ವದ ಯೋಜನೆ ಜಾರಿಗೆ ತರಲಾಯಿತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅದರ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ ಎಂದರು.
     ತಾಲೂಕಿನ 45 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ಉದ್ದೇಶದ ಭದ್ರಾ ಮೇಲ್ದಂಡೆ ಯೋಜನೆಯನ್ನು ಯಡಿಯೂರಪ್ಪ ಸಿಎಂ ಇದ್ದಾಗ ಶಂಕುಸ್ಥಾಪನೆ ಮಾಡಲಾಯಿತು. ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದು ಬಿಜೆಪಿ. 157 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲೂ ಬಿಜೆಪಿಯ ಕೊಡುಗೆ ಹೆಚ್ಚಿದೆ ಎಂದು ತಿಳಿಸಿದರು.
     ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಜಿ.ಎಸ್. ಅನಿತ್ ಕುಮಾರ್, ಯಶವಂತರಾವ್, ಅಜಯಕುಮಾರ್, ಬಿ.ಎಂ. ಸತೀಶ್, ವೈ. ಮಲ್ಲೇಶ್, ಅನಿಲ್ ಕುಮಾರ್, ಕೃಷ್ಣಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts