More

    ದಾವಣಗೆರೆ ತಂಡಕ್ಕೆ ಪ್ರಶಸ್ತಿ ಡಬಲ್ಸ್

    ದಾವಣಗೆರೆ : ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ 56ನೇ ಜನ್ಮದಿನದ ಪ್ರಯುಕ್ತ ದಾವಣಗೆರೆ ಬಾಸ್ಕೆಟ್ಬಾಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ ದಾವಣಗೆರೆ ಬಿ.ಸಿ ತಂಡವು ಎರಡು ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದೆ.
     ಶುಕ್ರವಾರ ರಾತ್ರಿ ನಡೆದ ಪುರುಷರ ಫೈನಲ್ ಪಂದ್ಯದಲ್ಲಿ ದಾವಣಗೆರೆ ಬಿ.ಸಿ ತಂಡವು ಚಿಕ್ಕಮಗಳೂರಿನ ಮರಿಯನ್ ಎಸ್‌ಸಿ ತಂಡದ ವಿರುದ್ಧ 62-49 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು. ವಿಷ್ಣು 18 ಬಾಲ್ ಹಾಕುವ ಮೂಲಕ ಟಾಪ್ ಸ್ಕೋರರ್ ಎನಿಸಿದರು.
     18 ವರ್ಷ ವಯೋಮಿತಿಯ ಬಾಲಕರ ಫೈನಲ್ ಪಂದ್ಯದಲ್ಲಿ ದಾವಣಗೆರೆ ಬಿ.ಸಿ ತಂಡವು ಚಿಕ್ಕಮಗಳೂರಿನ ಮರಿಯನ್ ಎಸ್‌ಸಿ ತಂಡದ ವಿರುದ್ಧ 51-49 ಅಂಕಗಳ ಅಂತರದಿಂದ ಜಯ ಗಳಿಸಿತು. 11 ಬಾಲ್ ಹಾಕುವ ಮೂಲಕ ವಿಷ್ಣು ಎನ್.ಎಂ ಟಾಪ್ ಸ್ಕೋರರ್ ಎನಿಸಿಕೊಂಡರು.
     16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ವಿಜಯಪುರದ ಡಿವೈಇಎಸ್ ತಂಡವು ಬೆಂಗಳೂರಿನ ವಿದ್ಯಾನಗರದ ಸ್ಪೋರ್ಟ್ಸ್ ಹಾಸ್ಟೆಲ್ ತಂಡವನ್ನು 35-31 ಅಂಕಗಳ ಅಂತರದಿಂದ ಮಣಿಸಿತು. ಮಾಬೂಬಿ ಮುಲ್ಲಾ 13 ಪಾಯಿಂಟ್ ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದರು.
     ಹದಿನಾರು ವರ್ಷ ವಯೋಮಿತಿಯ ಬಾಲಕಿಯರ ಬೆಸ್ಟ್ ಶೂಟರ್ ಆಗಿ ಬೆಂಗಳೂರಿನ ವಿದ್ಯಾನಗರದ ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ದೀಪಿಕಾ, ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಗಿ ಡಿವೈಎಸ್ ವಿಜಯಪುರ ತಂಡದ ಆಟಗಾರ್ತಿ ನಂದಿನಿ, 18 ವರ್ಷ ವಯೋಮಿತಿಯ ಬಾಲಕರ ಬೆಸ್ಟ್ ಶೂಟರ್ ಆಗಿ ಚಿಕ್ಕಮಗಳೂರು ತಂಡದ ಆಟಗಾರ ದರ್ಶನ್, ಮೋಸ್ಟ್ ವಾಲ್ಯುಯೆಬಲ್ ಪ್ಲೇಯರ್ ಆಗಿ ದಾವಣಗೆರೆ ತಂಡದ ಅಮಿತ್ ಎಂ. ಹೊರಹೊಮ್ಮಿದರು.
     ಪುರುಷರ ವಿಭಾಗದಲ್ಲಿ ಬೆಸ್ಟ್ ಶೂಟರ್ ಆಗಿ ಚಿಕ್ಕಮಗಳೂರು ಎಸ್‌ಸಿ ತಂಡದ ಅಶ್ವಿನ್, ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಗಿ ದಾವಣಗೆರೆ ತಂಡದ ವಿಷ್ಣು ಎನ್.ಎಂ. ಆಯ್ಕೆಯಾದರು.
     ವಿಜೇತ ತಂಡಗಳಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರಶಸ್ತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಸ್ಕೆಟ್ಬಾಲ್ ಅಭ್ಯಾಸ ಮಾಡುವ ಆಟಗಾರರಿಗೆ ಸೂಕ್ತ ಒಳಾಂಗಣದ ವ್ಯವಸ್ಥೆ ಮಾಡಲಾಗುವುದು ಎಂದರು.
     ದಾವಣಗೆರೆ ಬಾಸ್ಕೆಟ್ಬಾಲ್ ಕ್ಲಬ್ನ ಗೌರವಾಧ್ಯಕ್ಷ ಸಿ. ರಾಮಮೂರ್ತಿ, ಅಧ್ಯಕ್ಷ ಆರ್. ಕಿರಣ್ ಕುಮಾರ್, ಕಾರ್ಯದರ್ಶಿ ಆರ್. ವೀರೇಶ್, ಖಜಾಂಜಿ ಎಸ್.ಎಲ್. ಪ್ರಸನ್ನ, ದಿನೇಶ್ ಕೆ. ಶೆಟ್ಟಿ, ತರಬೇತುದಾರರಾದ ದರ್ಶನ್ ಮತ್ತು ಸಚಿನ್ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts