More

    ಮೊಬೈಲ್ ಆಧರಿತ ಸಮೀಕ್ಷೆ ಜವಾಬ್ದಾರಿ ಬೇಡ

    ದಾವಣಗೆರೆ : ಕುಟುಂಬಗಳ ಆರೋಗ್ಯ ಮತ್ತು ಪೌಷ್ಟಿಕತೆಯ ಇ-ಸಮೀಕ್ಷೆ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸುವುದು ಬೇಡ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಆಗ್ರಹಿಸಿದೆ.
     ಆಶಾ ಕಾರ್ಯಕರ್ತೆಯರ ನಿಯೋಗ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿತು.
     ಕಳೆದ ಕೆಲ ದಿನಗಳಿಂದ ತಮಗೆ ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ಮಾಡಲು ತರಬೇತಿ ನೀಡಿದ್ದಾರೆ. ಮ್ಯಾನುವಲ್ ಆಗಿ ಕೆಲಸ ಮಾಡಲು ತಾವು ಸಿದ್ಧರಿದ್ದು ಮೊಬೈಲ್ ಆಧಾರಿತ ಕೆಲಸ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಹೇಳಿದರು.
     ಮುಖ್ಯವಾಗಿ ಆಶಾಗಳಿಗೆ ಮೊಬೈಲ್ ಮತ್ತು ಡಾಟಾ ನೀಡದೆ ಇರುವುದರಿಂದ ಮಾಡಲು ಆಗುವುದಿಲ್ಲ. ಇನ್ನೂ ಕೆಲ ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಕೊಟ್ಟರೂ ಸಹ ಆ್ಯಪ್ ಮೂಲಕ ನಿರ್ವಹಿಸುವುದು ಆಗುವುದಿಲ್ಲ ಎಂದು ತಿಳಿಸಿದರು.
     ಹಲವಾರು ಆಶಾಗಳಿಗೆ ಸ್ಮಾರ್ಟ್ ಫೋನ್ ಇಲ್ಲ. ಕೆಲವರಿಗೆ ಮೊಬೈಲ್ ಇದ್ದರೂ ಹೊಸ ಆ್ಯಪ್ ಸಪೋರ್ಟ್ ಮಾಡುತ್ತಿಲ್ಲ. ಈಗಾಗಲೆ ನೀಡಿರುವ ಸಿಯುಜಿ ಸಿಮ್ ನೆಟ್‌ವರ್ಕ್ ಸಿಗುತ್ತಿಲ್ಲ. ಮೊಬೈಲ್ನಲ್ಲಿ ಇಂಗ್ಲಿಷ್‌ನಲ್ಲಿ ಟೈಪ್ ಮಾಡುವುದು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಸರ್ವೆ ಮಾಡಲು ಹೋದಾಗ ಮಾಹಿತಿ ಕೊಡಲು ಕೆಲವರು ವಿರೋಧಿಸುತ್ತಾರೆ ಎಂದು ಹೇಳಿದರು.
     ಆಶಾ ಕಾರ್ಯಕರ್ತೆಯರು ಇತರೆ ಸಿಬ್ಬಂದಿಗಳೊಂದಿಗೆ ಸೇರಿ ಸರ್ವೆ ಮಾಡಲು ವ್ಯವಸ್ಥೆ ಕೈಗೊಳ್ಳಬೇಕು. ಸರ್ವೆ ಮಾಡಲು ಸಾಧ್ಯ ಇರುವವರಿಗೆ ಮೊಬೈಲ್- ನೆಟ್ ಪ್ಯಾಕ್ ನೀಡಿ ಆ ಕೆಲಸ ಮಾಡಿಸಿ. ಮೊಬೈಲ್ ಬಳಸಲು ಆಗದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಸಮೀಕ್ಷೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಆಶಾಗಳು ಮನೆ ಮನೆಗೆ ಬಂದಾಗ ಮಾಹಿತಿ ನೀಡಬೇಕೆನ್ನುವ ತಿಳಿವಳಿಕೆ ನೀಡಬೇಕು. ವ್ಯಾಪಕ ಪ್ರಚಾರ ಮಾಡಿ ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಒತ್ತಾಯಿಸಿದರು.
     ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ನೇತೃತ್ವ ವಹಿಸಿದ್ದರು. ಲಲಿತಮ್ಮ ನರಗನಹಳ್ಳಿ, ತಿಪ್ಪಮ್ಮ ನೀರ್ಥಡಿ, ಅನಿತಾ ಶಿವಪುರ, ಮಂಜುಳಾ ಆನಗೋಡು, ಶಶಿಕಲಾ ಹೂವಿನಮಡು, ಆಶಾ ಪಾಂಡೋಮಟ್ಟಿ, ದೇವಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts