More

    ಹಿಂಗಾರು ಮಳೆ ಸಿಂಚನ, ಬಿತ್ತನೆ ಚುರುಕು

    ರಮೇಶ ಜಹಗೀರದಾರ್ ದಾವಣಗೆರೆ
     ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಆಗುತ್ತಿರುವುದರಿಂದ ಹಿಂಗಾರು ಬಿತ್ತನೆ ಚುರುಕಾಗಿದೆ.
     ಮುಂಗಾರು ಕೈಕೊಟ್ಟಿದ್ದರಿಂದ ನಿರಾಶರಾಗಿದ್ದ ರೈತರು ಹಿಂಗಾರಿನಲ್ಲಾದರೂ ಒಳ್ಳೆಯದಾಗಬಹುದು ಎಂಬ ನಿರೀಕ್ಷೆಯೊಂದಿಗೆ ಮತ್ತೆ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ.
     ಜಿಲ್ಲೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳಿದ್ದು ಬಿತ್ತನೆ ಬೀಜ ಖರೀದಿಸಲು ಅನ್ನದಾತರು ಆ ಕೇಂದ್ರಗಳಿಗೆ ಬರುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳೂ ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಂಡಿದ್ದಾರೆ.
     ಜಿಲ್ಲೆಯಲ್ಲಿ 21,095 ಹೆಕ್ಟೇರ್ ಹಿಂಗಾರು ಬಿತ್ತನೆಯ ಗುರಿಯಿದೆ. ಇದುವರೆಗೆ 765 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ಪೈಕಿ ಜಗಳೂರು ತಾಲೂಕಿನಲ್ಲೇ ಅತಿಹೆಚ್ಚು 8300 ಹೆಕ್ಟೇರ್ ಪ್ರದೇಶವಿದೆ. ಸದ್ಯಕ್ಕೆ 30 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.
     ಹೊನ್ನಾಳಿ ತಾಲೂಕಿನಲ್ಲಿ 4230 ಹೆಕ್ಟೇರ್ ಇದ್ದು 110 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ನ್ಯಾಮತಿ ತಾಲೂಕಿನಲ್ಲಿ 4070 ಹೆಕ್ಟೇರ್ ಇದ್ದು 128 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
     ಜಗಳೂರು ತಾಲೂಕಿನಲ್ಲಿ ಕಡಲೆ, ರಾಗಿ, ದಾವಣಗೆರೆ, ಹೊನ್ನಾಳಿ, ಚನ್ನಗಿರಿ ತಾಲೂಕುಗಳಲ್ಲಿ ಹಿಂಗಾರಿ ಜೋಳ, ಅಲಸಂದೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಭೂಮಿ ಸಿದ್ಧತೆ ಮಾಡಿಕೊಂಡಿರುವ ಕಡೆ ರೈತರು ಬಿತ್ತನೆ ಶುರು ಮಾಡಿದ್ದಾರೆ. ಇನ್ನೊಂದು ವಾರದಲ್ಲಿ ಬಿತ್ತನೆ ಇನ್ನಷ್ಟು ಚುರುಕಾಗಬಹುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು.
     ಜಿಲ್ಲೆಯಲ್ಲಿ ನ. 1ರಿಂದ 7ರ ವರೆಗೆ 13 ಮಿ.ಮೀ. ವಾಡಿಕೆಯಿದ್ದು 67 ಮಿ.ಮೀ. ಮಳೆಯಾಗಿದೆ.
     …
     (ಕೋಟ್)
     ಮಳೆಯಾಗುತ್ತಿರುವುದರಿಂದ ಹಿಂಗಾರು ಬಿತ್ತನೆ ಆರಂಭವಾಗಿದೆ. ಕಡಲೆ, ಜೋಳ ಇನ್ನಿತರ ಬಿತ್ತನೆ ಬೀಜಗಳನ್ನು ಜಿಲ್ಲೆಯ 20 ರೈತ ಸಂಪರ್ಕ ಕೇಂದ್ರಗಳಲ್ಲಿ ಇಡಲಾಗಿದೆ. ರೈತರೂ ಬಿತ್ತನೆ ಬೀಜ ಖರೀದಿಸಲು ಬರುತ್ತಿದ್ದಾರೆ. ರೈತರು ಬೀಜೋಪಚಾರ ಮಾಡಿ ನಂತರ ಬಿತ್ತನೆ ಮಾಡಬೇಕು.
      ಶ್ರೀನಿವಾಸ ಚಿಂತಾಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts