More

    ಯಾಂತ್ರೀಕೃತ ಭತ್ತದ ಸಸಿ ಮಡಿಗೆ ಭೇಟಿ

    ದಾವಣಗೆರೆ : ಯಾಂತ್ರೀಕೃತ ಭತ್ತದ ನಾಟಿ ಮಾಡಲು ಸಸಿ ಮಡಿ ತಯಾರಿಕೆ ಮಾಡುವುದೇ ಒಂದು ಸವಾಲು ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ಹೇಳಿದರು.
     ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ತಾಲೂಕಿನ ಹಳೇಬಾತಿ ಗ್ರಾಮದಲ್ಲಿ ಭತ್ತದ ಬೆಳೆಯಲ್ಲಿ ಸಮಗ್ರ ನಿರ್ವಹಣೆಯ ಮುಂಚೂಣಿ ಪ್ರಾತ್ಯಕ್ಷಿಕೆ ಯಾಂತ್ರಿಕೃತ ಸಸಿ ಮಡಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಮಾತನಾಡಿದರು.
     ಸಾಮಾನ್ಯ ಪದ್ಧತಿಗೆ ಹೋಲಿಸಿದರೆ ಯಾಂತ್ರಿಕೃತ ನಾಟಿ ಪದ್ಧತಿಯಲ್ಲಿ ಎಕರೆಗೆ 10 ಕೆಜಿ ಬೀಜ ಬಳಕೆಯಾಗುತ್ತದೆ. ಸುಮಾರು
     ಹತ್ತು ಕೆಜಿ ಬೀಜ ಉಳಿತಾಯ ಮಾಡಬಹುದು ಎಂದರು.
     ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ ಮಾತನಾಡಿ ಕೂಲಿ ಆಳುಗಳ ಸಮಸ್ಯೆಗೆ ಯಾಂತ್ರಿಕೃತ ನಾಟಿ ಪದ್ಧತಿ ಮುಂದಿನ
     ದಿನಗಳಲ್ಲಿ ಸೂಕ್ತ ಪರಿಹಾರವಾಗಲಿದೆ ಎಂದು ತಿಳಿಸಿದರು.
     ಕೃಷಿಕ ನಾಗರಾಜ ಮಾತನಾಡಿ ಬಿತ್ತನೆ ಸಂದರ್ಭದಲ್ಲಿ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿರುವುದರಿಂದ ಸಸಿ ಮಾಡಿ ಉತ್ತಮವಾಗಿದೆ ಎಂದು ಹೇಳಿದರು.
     ಪ್ರಗತಿಪರ ರೈತರಾದ ಮಲ್ಲಿಕಾರ್ಜುನ, ಶಂಕರ ಮತ್ತು ಹರೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts