More

    ದತ್ತಾತ್ರೇಯ ದೇವರ ಹೆಸರಲ್ಲಿ ಭಕ್ತರಿಗೆ “ಮಹಾ ವಂಚನೆ” ಪ್ರಕರಣ ಸೆನ್​​​ ಪೊಲೀಸರಿಗೆ ವರ್ಗಾವಣೆ: ಐವರಿಗೆ ನೋಟಿಸ್​​ ಜಾರಿ

    ಕಲಬುರಗಿ: ಪ್ರಸಿದ್ಧ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಹೆಸರಿನಲ್ಲಿ ನಡೆದ ವಂಚನೆ ಪ್ರಕರಣವನ್ನು ಗಾಣಗಾಪುರ ಪೊಲೀಸ್ ಠಾಣೆಯಿಂದ ಸೆನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.

    ಸೆನ್ ಪೊಲೀಸರಿಂದ ದತ್ತಾತ್ರೇಯ ದೇವಸ್ಥಾನದ ನಕಲಿ ವೆಬ್ ಸೈಟ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಸಂಬಂಧ ಐವರಿಗೆ ನೋಟಿಸ್​ ಜಾರಿ ಮಾಡಲಾಗಿದೆ.ವಲ್ಲಭ ಪೂಜಾರಿ , ಅಂಕುರ ಪೂಜಾರಿ, ಪ್ರತಿಕ ಪೂಜಾರಿ, ಗಂಗಾಧರ ಪೂಜಾರಿ, ಶರತ್ ಭಟ್ ನಂದುಭಟ್ಟ ಪೂಜಾರಿ ಎಂಬುವವರಿಗೆ ನೊಟೀಸ್​ ನೀಡಲಾಗಿದೆ.

    ದತ್ತಾತ್ರೇಯ ದೇವಸ್ಥಾನ ಹೆಸರಿನಲ್ಲಿ ನಕಲಿ ವೆಬ್​ಸೈಟ್​ಗಳನ್ನು ತೆರೆದು ಪೂಜೆ, ಹೋಮದ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ.ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಅಧಿಕೃತ ವೆಬ್​ಸೈಟ್​ ಇರುವಾಗಲೇ ಕೆಲ ಅರ್ಚಕರು ಗೊಂದಲ ಮೂಡಿಸುವಂತ ಹೆಸರುಗಳಲ್ಲಿ ವೆಬ್​ಸೈಟ್​ ಆರಂಭಿಸಿ ಭಕ್ತರಿಗೆ  ಟೋಪಿ ಹಾಕಿ ಸರ್ಕಾರಿ ಖಜಾನೆಗೆ ಸೇರಬೇಕಿದ್ದ ಕೋಟ್ಯಂತರ ಹಣ ಲಪಟಾಯಿಸಿದ್ದಾರೆ. ಬರೋಬ್ಬರಿ 35 ಕೋಟಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು.

    ಈ ಸಂಬಂಧ ಸೋಮವಾರ ಪೊಲೀಸರ ಮುಂದೆ ಹಾಜರಾಗುವಂತೆ ನೊಟೀಸ್​ನಲ್ಲಿ ಹೇಳಲಾಗಿದೆ. ಈ ಮಧ್ಯೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ದೂರುದಾರ, ನಾಮ ದೇವರಿಂದ‌ ನಕಲಿ ವೆಬ್ ಸೈಟ್​​ಗಳ ಕುರಿತು ಮಾಹಿತಿ ಪಡೆದಿದ್ದಾರೆ.

    ಇನ್ನೆರಡು ನಕಲಿ ವೆಬ್​​​ಸೈಟ್ ಗಳ ಮಾಹಿತಿಗಾಗಿ ಪೊಲೀಸರು ವೆಬ್​ಸೈಟ್​ನವರ ಮೊರೆ ಹೋಗುವ ಸಾಧ್ಯತೆ ಇದೆ. ಸದ್ಯ ವೆಬ್​ಸೈಟ್​ ಸಂಪರ್ಕ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೆಬ್ ಸೈಟ್ ಯಾವಗ ಓಪನ್ ಆಯ್ತು , ವೆಬ್ ಸೈಟ್ ಗೆ ಯಾವ ಅಕೌಂಟ್ ನಂಬರ್​ ಹಾಕಲಾಗಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬೇರೆಯಾಗಲು ಬಂದು ಒಂದಾಗಿ ಮರಳಿದ ದಂಪತಿ: ನ್ಯಾಯಾಧೀಶರಿಂದಲೇ ರಾಜಿ ಸಂಧಾನ!

    ಹಳ್ಳದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ತಪ್ಪೊಪ್ಪಿಕೊಂಡ ಆಸ್ಪತ್ರೆ, ಯಾರೇ ಆದರೂ ಕ್ರಮ ಕೈಗೊಳ್ಳಿ ಅಂದ್ರು ಆರೋಗ್ಯ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts