More

    ಕಾಯಕ, ದಾಸೋಹ ತತ್ವ ಆತ್ಮಗೌರವದ ಸಂಕೇತ

    ರಾಯಚೂರು: ಶರಣು ಹೇಳಿದ ಕಾಯಕ ಮತ್ತು ದಾಸೋಹ ತತ್ವಗಳು ನಮ್ಮ ಆತ್ಮಗೌರವದ ಸಂಕೇತಗಳಾಗಿದ್ದು, ಕಾಯಕ ನಿರತನಾಗಿದ್ದಲ್ಲಿ ಗುರುದರ್ಶನ ಮತ್ತು ಲಿಂಗಪೂಜೆಯನ್ನು ಮರೆತರೆ ಕೇಡಿಲ್ಲ ಎಂದು ನಿವೃತ್ತ ಉಪನ್ಯಾಸಕಿ ಜಯಶ್ರೀ ಮಹಾಜನಶೆಟ್ಟಿ ಹೇಳಿದರು.
    ಸ್ಥಳೀಯ ಕರ್ನಾಟಕ ಸಂಘದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಶರಣ ಚಿಂತನ ವಚನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಹ್ಯ ಆಡಂಬರದ ಲಾಂಛನಕ್ಕಿಂತ ಸತ್ಯ ಶುದ್ಧ ಕಾಯಕ ನಿರತನೇ ನಿಜವಾದ ಜಂಗಮನಾಗಿದ್ದಾರೆ ಎಂದರು.
    ಶರಣ ದಂಪತಿಗಳಾಗಿದ್ದ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ಸತ್ಯ ಶುದ್ಧವಾದ ಕಾಯಕ ಮತ್ತು ಚಿತ್ತ ಶುದ್ಧಿ ದಾಸೋಹ ತತ್ವಗಳ ಮೂಲಕ ಶರಣ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹನೀಯರಾಗಿದ್ದಾರೆ. ಶರಣರ ಅನುಭಾವದ ಮೂಸೆಯಲ್ಲಿ ಮೂಡಿರುವ ವೈಚಾರಿಕತೆ, ಪ್ರಾಮಾಣಿಕತೆ, ತತ್ವನಿಷ್ಠೆಗಳು ಶರಣಧರ್ಮವನ್ನು ವಿಶ್ವಧರ್ಮವನ್ನಾಗಿ ಸಾರಿವೆ ಎಂದು ಹೇಳಿದರು.
    ನಿವೃತ್ತ ಪ್ರಾಚಾರ್ಯ ಮಹಾದೇವಪ್ಪ ಏಗನೂರು ಮಾತನಾಡಿ, ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ ದಂಪತಿಗಳ ಅನ್ಯೋನ್ಯತೆ ನಮಗೆಲ್ಲ ಆದರ್ಶಪ್ರಾಯವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದಾಗ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದರು.
    ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಜಾತಿ ತಾರತಮ್ಯ ಸಾಮಾಜಿಕ ಅನಿಷ್ಠವಾಗಿದೆ. ಅದನ್ನು ತೊಡೆದು ಹಾಕಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದರು.
    ಈ ಸಂದರ್ಭದಲ್ಲಿ ಸೆಂಟ್ ಜಾನ್ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ವಚನ ಗಾಯನ ಜರುಗಿತು. ಕಾರ್ಯಕ್ರಮದಲ್ಲಿ ನಿವೃತ್ತ ವಿಮಾ ಅಕಾರಿ ಎಸ್.ಶಂಕರಗೌಡ, ಸಂಘದ ಕಾರ್ಯದರ್ಶಿ ಶ್ರೀನಿವಾಸ ಗಟ್ಟು, ಪದಾಕಾರಿಗಳಾದ ಬಾಬು ಭಂಡಾರಿಗಲ್, ಮುರಳೀಧರ ಕುಲಕರ್ಣಿ, ಸುಷ್ಮಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts