More

    ಆಶ್ರಯ ಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿ

    ನಾಲತವಾಡ: ಆಶ್ರಯ ಮನೆ ನಿರ್ಮಾಣ ಮಾಡಿದ ಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಆರ್. ದಾಯಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
    ಪಟ್ಟಣದಲ್ಲಿ ವಿವಿಧ ವಸತಿ ಯೋಜನೆಗಳಿಂದ ಆಯ್ಕೆಯಾದ ಲಾನುಭವಿಗಳು ಸಾಲ ಸೂಲ ಮಾಡಿ ಮನೆ ನಿರ್ಮಾಣ ಮಾಡಿದ್ದಾರೆ. ಹಂತ ಹಂತವಾಗಿ ಜಿಪಿಎಸ್ ಕೂಡ ಮಾಡಿಸಲಾಗಿದೆ. ಜಿಪಿಎಸ್ ಮಾಡಿ 9 ತಿಂಗಳ ಗತಿಸಿದ್ದರೂ ಹಣ ಜಮಾ ಆಗುತ್ತಿಲ್ಲ. ಇದರಿಂದ ಲಾನುಭವಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಾಲಗಾರರು ಮನೆ ಮುಂದೆ ಕುಳಿತುಕೊಳ್ಳುತಿದ್ದಾರೆ. ಆದ್ದರಿಂದ ಕೂಡಲೇ ವಸತಿ ನಿಗಮದ ಗಮನಕ್ಕೆ ತಂದು ಹಣ ಜಮಾ ಮಾಡುವಂತೆ ಒತ್ತಾಯ ಮಾಡಬೇಕು. ಒಂದು ವೇಳೆ ಮುಖ್ಯಾಧಿಕಾರಿಗಳು ವಿಳಂಬ ಮಾಡಿದರೆ ಸಂಘಟಕರಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪದಾಧಿಕಾರಿಗಳು ಎಚ್ಚರಿಸಿದರು.
    ಮನವಿ ಸ್ವೀಕರಿಸಿ ಮುಖ್ಯಾಧಿಕಾರಿ ಎಂ.ಆರ್.ದಾಯಿ ಮಾತನಾಡಿ, ಈ ಬಗ್ಗೆ ಆಡಳಿತ ಅಧಿಕಾರಿ ತಹಸೀಲ್ದಾರ್ ಗಮನಕ್ಕೆ ತರಲಾಗುವುದು ಎಂದರು.
    ನಾಲತವಾಡ ಹೋಬಳಿ ಘಟಕದ ಅಧ್ಯಕ್ಷ ಗುಂಡಪ್ಪ ಚಲವಾದಿ, ಹುಲಗಪ್ಪ ವಡ್ಡರ, ಮಂಜುನಾಥ ಕಟ್ಟಿಮನಿ, ಮಹಾದೇವ ಕೇಸಾಪೂರ, ಬಸವರಾಜ ಕಟ್ಟಿಮನಿ, ರಾಘು ಮಾದರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts