More

    ಫಿಕ್ಸ್​ ಆಯ್ತು ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ: ಟ್ವೀಟ್​ ಮೂಲಕ ಸರ್ಪ್ರೈಸ್​!

    ಬೆಂಗಳೂರು: ಲವ್​ ಮಾಕ್ಟೇಲ್​ ಚಿತ್ರದ ಮೂಲಕ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇದೀಗ ನಿಜ ಜೀವನದಲ್ಲೂ ಒಂದಾ​ಗುವ ಕಾಲ ಸನ್ನಿಹಿತವಾಗಿದೆ.

    ಹೌದು, ಮಿಲನಾ ಮತ್ತು ಕೃಷ್ಣ ಜೋಡಿಯ ಮದುವೆ ದಿನಾಂಕ ನಿಗದಿಯಾಗಿದ್ದು, ಟ್ವಿಟರ್​ ಮೂಲಕ ವಿನೂತನವಾಗಿ ವಿವಾಹ ದಿನಾಂಕವನ್ನು ಅಭಿಮಾನಿಗಳ ಮುಂದೆ ಭಾವಿ ತಾರಾದಂಪತಿ ಪ್ರಸ್ತುತಪಡಿಸಿದ್ದಾರೆ.

    ಟೇಬಲ್​ ಮೇಲಿನ ಕೇಕ್ ಹಾಗೂ ಹೂಗುಚ್ಚದ​ ಮುಂದೆ ನಮ್ಮ ಮದುವೆ ಎಂಬ ಕನ್ನಡದ ನಾಮಫಲಕವಿದ್ದು, ಅದರ ಸಮೀಪವೇ ಕೃಷ್ಣ ಮತ್ತು ಮಿಲನಾ ನಿಂತಿದ್ದಾರೆ. ಅವರಿಬ್ಬರ ಹಿಂದೆ ಫೆಬ್ರವರಿ 14 ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದ್ದು, ಹರಸಿ ಆಶೀರ್ವದಿಸಿ ಎಂದು ಮಿಲನಾ ಹಾಗೂ ಕೃಷ್ಣ ಕೋರಿದ್ದಾರೆ.

    ಅಲ್ಲಿಗೆ 2021ರ ಫೆವ್ರವರಿ 14ರ ಪ್ರೇಮಿಗಳ ದಿನದಂದೇ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬುದು ಖಚಿತವಾಗಿದೆ. ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರವಾಗಿದ್ದು, ಎಲ್ಲರೂ ಟ್ವೀಟ್​ ಮೂಲಕ ಶುಭಕೋರುತ್ತಿದ್ದಾರೆ.

    ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ವಿರುದ್ಧ ಎಫ್​ಐಆರ್​; ಒಂದು ಪ್ರಶ್ನೆ ಸೃಷ್ಟಿಸಿದ ವಿವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts