More

    ತುಂಬಿ ಹರಿಯುತ್ತಿರುವ ಗೋಕಾಕ್​ ಫಾಲ್ಸ್​​ನಲ್ಲಿ ಪ್ರವಾಸಿಗರ ಹುಚ್ಚಾಟ: ಜಲಪಾತದ ತುದಿಯಲ್ಲಿ ನಿಂತು ಫೋಟೋಗೆ ಪೋಸ್​!

    ಬೆಳಗಾವಿ: ನಿರಂತರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಒಂದೆಡೆಯಾದರೆ ಪ್ರವಾಸಿಗರು ಮಾತ್ರ ಫೋಟೋ ತೆಗೆಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.

    ಬೆಳಗಾವಿ ಜಿಲ್ಲೆ ಗೋಕಾಕ್ ನಗರದ ಹೊರವಲಯದಲ್ಲಿರು ಕರ್ನಾಟಕದ ನಯಾಗರ ಎಂದೇ ಖ್ಯಾತಿ ಪಡೆದಿರುವ ಗೋಕಾಕ್​ ಜಲಪಾತ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

    ದಿನಕ್ಕೆ ನೂರಾರು ಪ್ರವಾಸಿಗರು ಜಲಪಾತವನ್ನು ನೋಡಿ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದು, ಈ ವೇಳೆ ಕೆಲ ಪ್ರವಾಸಿಗರು ಜಲಪಾತದ ಮೇಲೆ ಹತ್ತಿ ಬಂಡೆಗಳ ಅಂಚಿನಲ್ಲಿ ಫೋಟೋ ತೆಗೆಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದಾರೆ.

    ಮಹಾರಾಷ್ಟ್ರದ ಪಶ್ಚಿಮ ಘಟ್ಟ, ಬೆಳಗಾವಿಯಲ್ಲಿ ಭಾರೀ ಮಳೆಯಾಗು ತ್ತಿರುವುದರಿಂದ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಇದರಿಂದ ಜಲಪಾತ ತುಂಬಿ ಹರಿಯುತ್ತಿದೆ. 180 ಅಡಿ ಎತ್ತರದಿಂದ ಧುಮುಕುತ್ತಿರುವ ಜಲಧಾರೆ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

    ಜಲಪಾತದ ತುತ್ತತುದಿಗೆ ತೆರಳಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಪ್ರವಾಸಿಗರು, ಜಲಪಾತದ ಮೇಲಿನ ಬಂಡೆಗಳ ಮೇಲೆ ನಿಂತು ಫೋಟೋಗೆ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಜಾರಿದರೂ ಮನುಷ್ಯನ ದೇಹವೂ ಸಿಗುವುದಿಲ್ಲ. ಇಂತಹ ಅಪಾಯಕಾರಿ ಸ್ಥಳವೆಂದು ಗೊತ್ತಿದರೂ ಫೋಟೋ ಕ್ರೇಜ್​ ಗೀಳಿಂದ ಹಿಂದೆ ಬಿದ್ದಿಲ್ಲ. (ದಿಗ್ವಿಜಯ ನ್ಯೂಸ್​)

    ಹೊಳೆಗೆ ಕಾರು ಬಿದ್ದ ಪ್ರಕರಣ: ಕಾರಿನಲ್ಲೂ ಇಲ್ಲ, ಹೊಳೆಯಲ್ಲೂ ಇಲ್ಲ, ನಿಜಕ್ಕೂ ಯುವಕರಿಬ್ಬರು ಹೋಗಿದ್ದೆಲ್ಲಿ?

    ಪ್ರೀತಿ ನಿರಾಕರಿಸಿದ್ದಕ್ಕೆ ಚಿಕ್ಕಪ್ಪನನ್ನೇ ಕೊಲೆಗೈದವ 24 ಗಂಟೆಯಲ್ಲಿ ಸೆರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts