More

    ಅಜ್ಜಿಯ ಬೇಸರ ನೀಗಿಸಲು ಡಾನ್ಸ್​ ಮಾಡಿದ ಮೊಮ್ಮಗ, ಟಿಕ್​ಟಾಕ್​ನಲ್ಲಿ ಭಾರಿ ವೈರಲ್​; ಇದನ್ನು ವೀಕ್ಷಿಸಿದವರ ಸಂಖ್ಯೆ ಎಷ್ಟು ಗೊತ್ತಾ?

    ನವದೆಹಲಿ: ಕೋವಿಡ್​ 19 ಲಾಕ್​ಡೌನ್​ನ ಬೇಸರ ನೀಗಿಸಲು ಅಜ್ಜಿಯೊಂದಿಗೆ ಮೊಮ್ಮಗ ನೃತ್ಯ ಮಾಡಿರುವ ಟಿಕ್​ಟಾಕ್​ ವಿಡಿಯೋ ತುಣುಕು ಭಾರಿ ವೈರಲ್​ ಆಗಿದೆ. ವಿಶ್ವದಾದ್ಯಂತ ಇದುವರೆಗೆ 10 ದಶಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿ, ಲೈಕ್​ ಮಾಡಿದ್ದಾರೆ.

    ಇನ್​ಸ್ಟಾಗ್ರಾಂ ಪೋಸ್ಟ್​ನ ಪ್ರಕಾರ, ಟಿಕ್​ಟಾಕ್​ ಬಳಕೆದಾರ ಬ್ರಿಟನ್​ನ ಲೂಯಿಸ್​ ಲೈ, ಕೋವಿಡ್​ 19 ಸೋಂಕಿನಿಂದಾಗಿ ಸ್ವತಃ ಕ್ವಾರಂಟೈನ್​ನಲ್ಲಿರುವ ತನ್ನ ಅಜ್ಜಿ ಫೈಲಿಸ್​ ಲೈಗೆ ಅಗತ್ಯವಸ್ತುಗಳನ್ನು ಕೊಡಲು ಹೋಗಿದ್ದರು. ಆಗ ಅಜ್ಜಿ ಬೇಸರಗೊಂಡಿದ್ದ ಲೂಯಿಸ್​ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತ ಮನೆಯ ಬಾಗಿಲಿನಲ್ಲಿ ಅಜ್ಜಿಯನ್ನು ನಿಲ್ಲಿಸಿ, ಕಾಂಪೌಂಡ್​ನ ಆಚೆ ತಾನು ನಿಂತುಕೊಂಡು ವಿಡಿಯೋ ಶೇರಿಂಗ್​ ಆ್ಯಪ್​ನ ಸಂಗೀತಕ್ಕೆ ನೃತ್ಯ ಮಾಡಿದರು. ಅಜ್ಜಿ ಕೂಡ ಈ ಸಂಗೀತಕ್ಕೆ ಹೆಜ್ಜೆ ಹಾಕಿ ನಲಿದರು.

    ಬಳಿಕ ಲೂಯಿಸ್​ ಈ ವಿಡಿಯೋ ತುಣುಕನ್ನು ಟಿಕ್​ಟಾಕ್​ಗೆ ಅಳವಡಿಸಿದ್ದರು ಎನ್ನಲಾಗಿದೆ.

    ದೇಶದಲ್ಲಿ ಮುಗಿದರೂ ಮುಂಬೈ ಮತ್ತು ಪುಣೆಯಲ್ಲಿ ಮೇ 3ರ ನಂತರವೂ ಲಾಕ್​ಡೌನ್​ ಮುಂದುವರಿಯುತ್ತಾ…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts