More

    ಶುದ್ಧ ನೀರಿನ ಘಟಕ ರಿಪೇರಿಗೆ ಹಿಂದೇಟು

    ಡಂಬಳ: ಮುಂಡರಗಿ ತಾಲೂಕಿನ ಹಲವೆಡೆ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಘಟಕಗಳಲ್ಲಿ ನಿರಂತರವಾಗಿ ನೀರು ದೊರೆಯದ ಕಾರಣ ಸ್ಥಳೀಯರು ಬೋರ್‌ವೆಲ್, ನಲ್ಲಿ, ಕೆರೆ, ಕಟ್ಟೆಗಳ ಹೋಗುವುದು ಅನಿವಾರ್ಯವಾಗಿದೆ.

    ಶುದ್ಧ ಘಟಕ 88

    ತಾಲೂಕಿನಲ್ಲಿ ಒಟ್ಟು 88 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ ಎಷ್ಟು ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ? ಎಷ್ಟು ದುರಸ್ತಿಯಲ್ಲಿವೆ? ಎಂಬ ಮಾಹಿತಿ ಸಂಬಂಧಪಟ್ಟ ಇಲಾಖೆಯಲ್ಲಿ ಇಲ್ಲವಾಗಿದೆ.
    ತಾಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತಿವೆ. ಡಂಬಳದಲ್ಲಿ ಒಂದು, ಹಿರೇವಡ್ಡಟ್ಟಿಯಲ್ಲಿ ಎರಡು ಘಟಕಗಳು ದುರಸ್ತಿಯಲ್ಲಿವೆ. ಇದರಿಂದ ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಹಿರೇವಡ್ಡಟ್ಟಿ ಗ್ರಾಮದ ಜನರು 9 ಕಿ.ಮೀ. ದೂರದ ಡಂಬಳ ಗ್ರಾಮದಿಂದ ಹಾಗೂ ಹೈತಾಪುರ ಗ್ರಾಮಸ್ಥರು ಸಮೀಪದ ಯಕ್ಲಾಸಪುರ ಗ್ರಾಮದಿಂದ ಶುದ್ಧ ನೀರನ್ನು ತಂದು ಕುಡಿಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದಷ್ಟು ಬೇಗ ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


    ಹಿರೇವಡ್ಡಟ್ಟಿ ಗ್ರಾಮದ ಎರಡು ಶುದ್ಧ ನೀರಿನ ಘಟಕಗಳು ಕೆಟ್ಟಿವೆ. ಘಟಕದಲ್ಲಿ ಶುಚಿತ್ವವಿಲ್ಲ. 2 ವರ್ಷಗಳಿಂದ ಡಂಬಳ ಗ್ರಾಮದಿಂದ ಶುದ್ಧ ನೀರನ್ನು ತರುತ್ತಿದ್ದೇನೆ. ಕೆಟ್ಟಿರುವ ತಾಲೂಕಿನ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ದುರಸ್ತಿ ಮಾಡಿಸಬೇಕು.
    ಶಿವಪ್ಪ ಅಂಕದ
    ಜಿಪಂ ಮಾಜಿ ಸದಸ್ಯ ಹಿರೇವಡ್ಡಟ್ಟಿ

    ಮುಂಡರಗಿ ತಾಲೂಕಿನಲ್ಲಿ ಒಟ್ಟು 88 ಶುದ್ಧ ನೀರಿನ ಘಟಕಗಳಿವೆ. ಎಲ್ಲೆಲ್ಲಿ ಕೆಟ್ಟಿವೆ ಎಂಬ ಮಾಹಿತಿ ನಮ್ಮಲ್ಲಿ ಲಭ್ಯವಿಲ್ಲ. ಯಾವ ಊರಿನಲ್ಲಿ ನೀರಿನ ಘಟಕ ಕೆಟ್ಟಿವೆ ಎಂಬುದನ್ನು ನಮ್ಮ ಗಮನಕ್ಕೆ ತಂದರೆ ಶೀಘ್ರ ದುರಸ್ತಿ ಮಾಡಿಸಲಾಗುವುದು.
    ದತ್ತಾತ್ರೇಯ
    ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂಡರಗಿ


    ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂಡರಗಿ ಇವರಿಗೆ 2023ರ ಮಾ. 10ರಂದು ಪತ್ರ ಮುಖೇನ ತಿಳಿಸಿದ್ದೇವೆ. ಆದರೆ, ಈವರೆಗೂ ಸರಿಪಡಿಸಿಲ್ಲ. ಸಂಬಂಧಪಟ್ಟವರು ಕೂಡಲೇ ಸರಿಪಡಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು.
    ಲತಾ ಮಾನೆ
    ಹಿರೇವಡ್ಡಟ್ಟಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts