More

    ಡಾಂಬರು ಕಿತ್ತು ಹೋದ ಕಾಡೂರು -ಹಲಸಿಕಟ್ಟೆ ಸಂಪರ್ಕ ಮಾರ್ಗ

    ಕೊಕ್ಕರ್ಣೆ: ಬ್ರಹ್ಮಾವರ ತಾಲೂಕಿನ ಕಾಡೂರು ಬಸ್ ನಿಲ್ದಾಣದಿಂದ ಹಲಸಿನಕಟ್ಟೆ ಸಂಪರ್ಕಿಸುವ ರಸ್ತೆ ಡಾಂಬರು ಸಂಪೂರ್ಣ ಕಿತ್ತು ಹೋಗಿದ್ದು ಜಲ್ಲಿಕಲ್ಲುಗಳೇ ತುಂಬಿ ಹೋಗಿದ್ದು ನಡೆಯಲೂ ಕಷ್ಟವಾಗುವ ಸ್ಥಿತಿಯಲ್ಲಿದೆ.
    ನಬಾರ್ಡ್ ಯೋಜನೆಯಡಿ 2011-12ರಲ್ಲಿ 52 ಲಕ್ಷ ರೂ. ವೆಚ್ಚದಲ್ಲಿ ಈ ರಸ್ತೆಗೆ ಡಂಬರು ಅಳವಡಿಸಲಾಗಿತ್ತು. ಪ್ರಸಕ್ತ ಈ ರಸ್ತೆಯ ಎರಡೂ ಕಡೆ ಪೊದೆಗಳು ಬೆಳೆದಿದ್ದು ಚರಂಡಿಯಲ್ಲಿ ಹೂಳು ತುಂಬಿದೆ. ಮಳೆಗಾಲದಲ್ಲಿ ನೀರು ರಸ್ತೆ ಮೇಲೆಯೇ ಹರಿಯುವುದರಿಂದ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಕಾಡುಪ್ರಾಣಿಗಳ ತಾಣವಾಗಿರುವ ಕಾರಣ ಬೀದಿದೀಪದ ವ್ಯವಸ್ಥೆಯೂ ಇಲ್ಲದೆ ರಾತ್ರಿ ಸಂಚರಿಸಲೂ ಭಯವಾಗುತ್ತದೆ. ಸುಮಾರು 150ಕ್ಕೂ ಅಧಿಕ ಮನೆಗಳಿರುವ ಈ ಭಾಗದಲ್ಲಿ ಕಂಬಳಗದ್ದೆ ರಸ್ತೆ, ಶ್ರೀ ಅಮ್ಮನವರ ದೇವಸ್ಥಾನ, ಲಕ್ಷ್ಮೀನಾರಾಯಣ ದೇವರ ಮಠ, ಪ್ರಾಥಮಿಕ ಶಾಲೆ, ಹಾಲು ಡೇರಿಗಳಿದ್ದು 750ಕ್ಕೂ ಅಧಿಕ ಜನಸಂಖ್ಯೆ ಇದೆ.

    ಸುಮಾರು 10 ವರ್ಷದ ಹಿಂದೆ ಕಾಡೂರು ಬಸ್ ನಿಲ್ದಾಣದಿಂದ ಹಲಸಿನಕಟ್ಟೆವರೆಗೆ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿದ್ದು ಈ ರಸ್ತೆಗೆ ಮತ್ತೆ ಡಾಂಬರು ಹಾಕಿ ಬೀದಿದೀಪ, ಚರಂಡಿ ವ್ಯವಸ್ಥೆಯನ್ನು ಶೀಘ್ರದಲ್ಲಿ ಮಾಡಬೇಕು. ಮುಂದಿನ ಮಳೆಗಾಲ ಬರುವುದರ ಒಳಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
    ಪ್ರಕಾಶ್ ಆಚಾರ್ಯ, ಸ್ಥಳೀಯ ನಿವಾಸಿ

    ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆಯಿಂದ ಹನೆಹಳ್ಳಿಯವರೆಗೆ ರಸ್ತೆ ಅಭಿವೃದ್ಧಿ, ಡಾಂಬರು ಅಳವಡಿಸುವುದು, ರಸ್ತೆ ವಿಸ್ತರಣೆ, ಕಾಡೂರು -ತಂತ್ರಾಡಿ ಸಂಪರ್ಕಿಸುವ ರಸ್ತೆ ಹಾಗೂ ಹಲಸಿನಕಟ್ಟೆ ತನಕ ರಸ್ತೆ ಮರು ಡಾಂಬರು ಹಾಕಲು ಮತ್ತು ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    ಆನಂದ ನಾಯ್ಕ, ಕಾಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts