More

    ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

    ಶಿವಮೊಗ್ಗ: ಡಿಡಿಪಿಐ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಆಗರವಾಗಿದೆ. ನೈರ್ಮಲ್ಯ ಕಾಣದಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಪ್ರಮುಖರು ಮಂಗಳವಾರ ಕ್ಯಾಂಟೀನ್ ಎದುರು ಪ್ರತಿಭಟನೆ ನಡೆಸಿದರು.

    ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ಒದಗಿಸುವ ಸಂಬಂಧ ಸರ್ಕಾರ ಸ್ಥಾಪಿಸಿದ್ದ ಇಂದಿರಾ ಕ್ಯಾಂಟೀನ್ ಹೀನಾಯ ಸ್ಥಿತಿಯಲ್ಲಿದೆ. ಕುಡಿಯುವ ನೀರಿನ ತೊಟ್ಟಿಯಲ್ಲಿ ಕಸ ಕಡ್ಡಿ ಬಿದ್ದಿವೆ. ಹುಳುಗಳು ಸತ್ತು ಬಿದ್ದಿವೆ. ಇದನ್ನು ಸೇವಿಸುವ ಜನರ ಆರೋಗ್ಯ ಹದಗೆಡುವುದರಲ್ಲಿ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
    ಸರ್ಕಾರದ ಆದೇಶದಂತೆ ಬೆಳಗ್ಗೆ 300 ಜನಕ್ಕೆ ತಿಂಡಿ, ಮಧ್ಯಾಹ್ನ 500 ಜನಕ್ಕೆ ಊಟ ಎಂದು ಲೆಕ್ಕ ಕೊಡುವ ಗುತ್ತಿಗೆದಾರರು ಬೆಳಗ್ಗೆ 100 ಜನಕ್ಕೆ ತಿಂಡಿ ಒದಗಿಸುತ್ತಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ 100 ಮಂದಿಗೆ ಊಟದ ಟೋಕನ್ ನೀಡುತ್ತಾರೆ. ಇಲ್ಲಿ ಕೆಲಸ ಮಾಡುವವರಿಗೆ ಸಕಾಲದಲ್ಲಿ ಸಂಬಳ ನೀಡುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಆಹಾರವನ್ನೂ ಗ್ರಾಹಕರಿಗೆ ನೀಡುತ್ತಿಲ್ಲ. ಊಟಕ್ಕೆ ಚಪಾತಿ ನೀಡಿದರೆ ಹೆಚ್ಚುವರಿಯಾಗಿ 10 ರೂ. ಪಡೆಯಲಾಗುತ್ತಿದೆ. ಈ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
    ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷೃದಿಂದ ಸರ್ಕಾರದ ಯೋಜನೆ ದಾರಿ ತಪ್ಪಿದೆ. ಇಲ್ಲಿನ ಅವ್ಯವಸ್ಥೆ ಹಾಗೂ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಗುತ್ತಿಗೆದಾರರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
    ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್.ಹಾಲೇಶಪ್ಪ, ತಾಲೂಕು ಪ್ರಧಾನ ಸಂಚಾಲಕ ಪರಮೇಶ್ ಸೂಗೂರು, ಪ್ರಮುಖರಾದ ಶೇಷಪ್ಪ, ಶಿವಕುಮಾರ್, ಮೀನಾ, ರುದ್ರೇಶ್, ಸಂಜೀವ್, ನಾಸಿರ್, ಚಂದ್ರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts