More

    ಕರಾವಳಿಯಲ್ಲಿ 12 ಮಂದಿ ಸಾವು

    ಮಂಗಳೂರು/ಉಡುಪಿ: ದ.ಕ. ಜಿಲ್ಲೆಯಲ್ಲಿ ಬುಧವಾರ 11 ಸಾವು ಸೇರಿದಂತೆ 314 ಕೋವಿಡ್ ಪಾಸಿಟಿವ್ ಹಾಗೂ ಉಡುಪಿ ಜಿಲ್ಲೆಯಲ್ಲಿ ಓರ್ವನ ಸಾವಿನ ಸಹಿತ 375 ಪಾಸಿಟಿವ್ ಪ್ರಕರಣ ವರದಿಯಾಗಿದೆ.
    ದ.ಕ. ಜಿಲ್ಲೆಯಲ್ಲಿ ಮೃತರಾದವರಲ್ಲಿ 6 ಮಂದಿ ಹೊರ ಜಿಲ್ಲೆಗಳಿಂದ ಬಂದವರು, ನಾಲ್ವರು ಮಂಗಳೂರಿನವರು, ಒಬ್ಬರು ಬಂಟ್ವಾಳದವರು. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಮರಣ ಪ್ರಕರಣ 330ಕ್ಕೇರಿದೆ.

    ಪಾಸಿಟಿವ್ ಬಂದ 314ರ ಪೈಕಿ 215 ಮಂದಿ ಮಂಗಳೂರು, 52 ಬಂಟ್ವಾಳ, ಬೆಳ್ತಂಗಡಿ 10, ಪುತ್ತೂರು 8, ಸುಳ್ಯ 2 ಮತ್ತು ಇತರ ಜಿಲ್ಲೆಯ 27 ಮಂದಿ ಸೇರಿದ್ದಾರೆ. 156 ಮಂದಿಗೆ ಕೋವಿಡ್ ಲಕ್ಷಣಗಳಿದ್ದರೆ 158 ಮಂದಿ ಲಕ್ಷಣ ರಹಿತರು. ಒಟ್ಟು ಕೋವಿಡ್ ಪ್ರಕರಣ 11092ಕ್ಕೇರಿದ್ದು, ಸಕ್ರಿಯ ಪ್ರಕರಣಗಳು 2339. ಬುಧವಾರ ಒಂದೇ ದಿನ 296 ಮಂದಿ ರೋಗಮುಕ್ತರಾಗಿದ್ದು, ಇದರಲ್ಲಿ 245 ಮಂದಿ ಹೋಮ್ ಐಸೊಲೇಶನ್, ಇಬ್ಬರು ಕೋವಿಡ್ ಕೇರ್ ಹಾಗೂ 49 ಆಸ್ಪತ್ರೆಗಳಿಂದ ಬಿಡುಗಡೆಯಾದವರು. ಒಟ್ಟು ಡಿಸ್‌ಚಾರ್ಜ್ ಆದವರ ಸಂಖ್ಯೆ 8423 ತಲುಪಿದೆ.

    ಉಡುಪಿಯಲ್ಲಿ 375 ಮಂದಿಗೆ ಸೋಂಕು
    ಉಡುಪಿ ಜಿಲ್ಲೆಯಲ್ಲಿ ಬುಧವಾರ 375 ಮಂದಿಗೆ ಪಾಸಿಟಿವ್ ಬಂದಿದ್ದು, ಇದರಲ್ಲಿ ಉಡುಪಿಯ 215, ಕುಂದಾಪುರದ 131, ಕಾರ್ಕಳದ 27, ಹೊರಜಿಲ್ಲೆಯ ಇಬ್ಬರು ಸೇರಿದ್ದಾರೆ. 99 ಮಂದಿ ರೋಗ ಲಕ್ಷಣ ಹೊಂದಿದ್ದು, 276 ಮಂದಿ ಲಕ್ಷಣ ರಹಿತರು. ಕೋವಿಡ್ ಕೇರ್ ಸೆಂಟರ್‌ನಲ್ಲಿ 93, ಹೋಂ ಐಸೋಲೇಶನ್‌ನಲ್ಲಿ 282 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
    ಬುಧವಾರ ಮೃತಪಟ್ಟ ವ್ಯಕ್ತಿ ಉಡುಪಿ ತಾಲೂಕಿನ 49 ವರ್ಷದ ಪುರುಷನಾಗಿದ್ದಾರೆ. ಈ ದಿನದ ವರದಿಯಲ್ಲಿ 1608 ಮಂದಿಗೆ ನೆಗೆಟಿವ್ ಬಂದಿದೆ. 700 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. 1597 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. 111 ಮಂದಿ ಆಸ್ಪತ್ರೆಗಳಿಂದ, 70 ಮಂದಿ ಹೋಂ ಐಸೋಲೇಶನ್‌ನಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2831 ಸಕ್ರಿಯ ಪ್ರಕರಣಗಳಿದ್ದು, 1303 ಆಸ್ಪತ್ರೆಯಲ್ಲಿ, 1528 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಾಸರಗೋಡಿನಲ್ಲಿ 101
    ಕಾಸರಗೋಡು: ಜಿಲ್ಲೆಯ 101 ಮಂದಿ ಒಳಗೊಂಡಂತೆ ಕೇರಳದಲ್ಲಿ 2476 ಮಂದಿಗೆ ಕೋವಿಡ್-19 ರೋಗ ಬಾಧಿಸಿದೆ. 13 ಮಂದಿ ಮೃತಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯ 40 ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts