More

    ಪಶ್ವಿಮ ಬಂಗಾಳ: ಮೇಕೆ ಮೇಯಿಸಲು ಹೋಗಿದ್ದ ಕಾರ್ಮಿಕ, ಹಿಂದಿರುಗವಷ್ಟರಲ್ಲಿ ಒಲಿಯಿತು ಬಂಪರ್​​ ಲಾಟರಿ, ಬಡ ರೈತನೀಗ ಲಕ್ಷಾಧಿಪತಿ..!

    ಪಶ್ಚಿಮ ಬಂಗಾಳ: ಲಾಟರಿ ಗೆದ್ದು ರಾತ್ರೋ ರಾತ್ರಿ ಲಕ್ಷಾಧಿಪರಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಅದೃಷ್ಟ ಯಾರಿಗೆ ಯಾವಗ ಒಲಿಯುತ್ತೋ ಅನ್ನೋದು ಹೇಳೋಕೆ ಆಗೋಲ್ಲ. ಯಾರು ಯಾವಾಗ ಮತ್ತು ಹೇಗೆ ಬೇಕಾದರೂ, ಲಕ್ಷಾಧಿಪತಿಗಳಾಗಬಹುದು, ಕೋಟ್ಯಾಧಿಪತಿಯಾಗಿ ಮೆರೆಯಬಹುದು.


    ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯ ಕೂಲಿ ಕಾರ್ಮಿಕರೊಬ್ಬರು ಮೇಕೆ ಮೇಯಿಸಲು ಹೋಗಿದ್ದರು. ಆದರೆ ಮೇಕೆ ಮೇಯಿಸಿ ಹಿಂತಿರುಗುದಾಗ ಲಕ್ಷಾಧಿಪತಿಯಾಗಿದ್ದಾರೆ. ಇದು ಆಶ್ವರ್ಯಕರವಾದರೂ ಸತ್ಯ ಸಂಗತಿಯಾದರೂ ಸತ್ಯ.


    ಅಷ್ಟಕ್ಕೂ ಈ ಘಟನೆ ನಡೆದಿರುವುದು ಪಶ್ಚಿಮ ಬಂಗಾಳದ ಪೂರ್ವ ಬರ್ದಮನ್‌ನಲ್ಲಿ. ಮಾಧ್ಯಮಗಳ ವರದಿಯ ಪ್ರಕಾರ, ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲೆಯಲ್ಲಿ ವಾಸಿಸುವ ಕೂಲಿ ಕಾರ್ಮಿಕ ಭಾಸ್ಕರ್ ಮಜಿಗೆ ಅದೃಷ್ಟ ಕೈಹಿಡಿದಿದೆ. ಮೇಕೆ ಮೇಯಿಸಲು ಹೋಗಿದ್ದ ಈ ಕಾರ್ಮಿಕ, ಕೆಲಸ ಮುಗಿಸಿ ಹಿಂತಿರುಗುವಷ್ಟರಲ್ಲಿ ಲಾಟರಿ ಹೊಡೆದು ಲಕ್ಷಾಧಿಪತಿಯಾಗಿದ್ದಾನೆ.


    ರೈತ ಕಳೆದ ಹತ್ತು ವರ್ಷಗಳಿಂದ ಲಾಟರಿ ಟಿಕೆಟ್‌’ಗಳನ್ನು ಖರೀದಿಸುತ್ತಿದ್ದನಂತೆ. ಅದೇ ರೀತಿ ಭಾನುವಾರದಂದು 40 ರೂಪಾಯಿ ಸಾಲ ಮಾಡಿ ಲಾಟರಿ ಟಿಕೆಟ್ ಖರೀದಿಸಿದ್ದು, ಮಧ್ಯಾಹ್ನದ ವೇಳೆಗೆ ಲಕ್ಷಾಧಿಪತಿಯಾಗಿದ್ದಾನೆ.


    ಸುದ್ದಿ ಕೇಳಿ ಆತನಿಗೂ ಖುಷಿಯಾಗಿದ್ದು, ಕುಟುಂಬಸ್ಥರು ಸಂತಸದಲ್ಲಿ ಕುಣಿದಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts