More

    ಈ ರಾಶಿಯವರಿಗೆ ಸಂಜೆಯ ವೇಳೆಗೆ ಶುಭ ಸುದ್ದಿ: ನಿತ್ಯಭವಿಷ್ಯ

    ಮೇಷ: ಪತ್ನಿಯೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ವಿವಾಹದ ಪ್ರಯತ್ನದಲ್ಲಿ ಸಕಾರಾತ್ಮಕ ಫಲಿತಾಂಶ. ಮಗಳಿಂದ ಶುಭ ಸುದ್ದಿ. ಶುಭಸಂಖ್ಯೆ: 9

     

    ವೃಷಭ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಿ. ಬಂಧು ವರ್ಗದಲ್ಲಿ ವಿರಸ ತಲೆದೋರಬಹುದು. ಶುಭಸಂಖ್ಯೆ: 6

     

    ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ದೃಢನಿರ್ಧಾರ ತೆಗೆದುಕೊಳ್ಳಿ. ಅತಿಥಿ ಸತ್ಕಾರದಿಂದ ಸಮಾಧಾನ. ಸಂಜೆಯ ವೇಳೆಗೆ ಶುಭ ಸುದ್ದಿ. ಶುಭಸಂಖ್ಯೆ: 6

     

    ಕಟಕ: ಬಹಳ ದಿನಗಳಿಂದ ನಿರೀಕ್ಷೆಯಲ್ಲಿ ಇದ್ದ ಭೂ ಖರೀದಿಗೆ ಚಾಲನೆ. ತಾಯಿಯ ಮಾರ್ಗದರ್ಶನ ಪಾಲಿಸಿ. ಬಂಧುಗಳ ಭೆೇಟಿ. ಶುಭಸಂಖ್ಯೆ: 1

     

    ಸಿಂಹ: ಸಹೋದರಿ ಮನೆಯಲ್ಲಿ ಭೋಜನ. ಸಹೋದರರೊಂದಿಗೆ ತಾಳ್ಮೆಯಿಂದ ವರ್ತಿಸಿ. ಜವಾಬ್ದಾರಿಯ ಕೆಲಸದ ಹೊಣೆ. ಶುಭಸಂಖ್ಯೆ: 8

     

    ಕನ್ಯಾ: ಮಹತ್ವದ ನಿರ್ಣಯ ತೆಗೆದುಕೊಳ್ಳುವಲ್ಲಿ ಗೊಂದಲ. ನಿಮ್ಮ ಮಾತಿನಿಂದ ವೈರಿಗಳು ಸೃಷ್ಟಿ ಆಗುವ ಅಪಾಯವಿದೆ, ಜಾಗ್ರತೆೆ. ಶುಭಸಂಖ್ಯೆ: 7

     

    ತುಲಾ: ಕಾರ್ಯದಲ್ಲಿ ವಿಘ್ನ ಉಂಟಾಗಿ ಅಸಮಾಧಾನ. ಕಲೆಯ ಅನಾವರಣಕ್ಕೆ ಅವಕಾಶ. ದಿನಾಂತ್ಯದಲ್ಲಿ ಹಿತೈಷಿಗಳ ಭೇಟಿ. ಶುಭಸಂಖ್ಯೆ: 6

     

    ವೃಶ್ಚಿಕ: ಯಾವುದೇ ಕೆಲಸದಲ್ಲಿ ವೇಗವಿಲ್ಲ. ಸೋಮಾರಿತನ ಬಿಟ್ಟರೆ ಮಾತ್ರ ಉತ್ತಮ ಭವಿಷ್ಯ ಕಾದಿದೆ. ಅಕ್ಕನಿಂದ ಸಾಂತ್ವನ. ಶುಭಸಂಖ್ಯೆ: 4

     

    ಧನುಸ್ಸು: ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಿಮಗೆ ಅನಿವಾರ್ಯ. ಉತ್ತಮ ಅನ್ನಪಾನ. ದಿನಾಂತ್ಯದಲ್ಲಿ ಸಂತಸ. ಶುಭಸಂಖ್ಯೆ: 6

     

    ಮಕರ: ಆಸ್ತಿ ವಿಚಾರಕ್ಕೆ ಕಲಹ ಉಂಟಾಗಬಹುದು. ಗೊಂದಲಗಳು ಸಹಜ, ಧೃತಿಗೆಡಬೇಡಿ. ಈಶ್ವರನನ್ನು ಆರಾಧಿಸಿ. ಶುಭಸಂಖ್ಯೆ: 7

     

    ಕುಂಭ: ಮನಸ್ಸಿಗೆ ಕ್ಲೇಶ. ಮನೆಯಲ್ಲಿ ಅವಮಾನ ಎದುರಿಸುವ ಸ್ಥಿತಿ. ನಟನಾ ವೃತ್ತಿಯವರಿಗೆ ಹೇರಳ ಅವಕಾಶ ದೊರೆಯಲಿದೆ. ಶುಭಸಂಖ್ಯೆ: 6

     

    ಮೀನ: ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ, ಮನಸ್ಸಿಗೆ ಸಮಾಧಾನ ಸಿಗುತ್ತದೆ. ಖರೀದಿಯಲ್ಲಿ ವಿಶೇಷ ವಸ್ತು ಪ್ರಾಪ್ತಿ. ಶುಭಸಂಖ್ಯೆ: 7

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts