ಮೇಷ: ಒತ್ತಡಗಳನ್ನು ಎದುರಿಸುವ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚು ಮಾಡಿಕೊಳ್ಳಿ. ಅದರಿಂದ ಅನನ್ಯವಾದ ಸಫಲತೆ ಲಭ್ಯ. ಶುಭಸಂಖ್ಯೆ: 4
ವೃಷಭ: ಭಾವನಾತ್ಮಕವಾದ ಶೋಷಣೆಗೆ ಒಳಗಾಗುವ ಸರದಿಗೆ ಬಂದು ನಿಲ್ಲಬೇಕಾದೀತು. ಜಾಗ್ರತೆ ಇದ್ದೇ ಇರಲಿ. ಶುಭಸಂಖ್ಯೆ: 9
ಮಿಥುನ: ಧೈರ್ಯ ಸಾಹಸಗಳನ್ನು ಒದಗಿಸುವ ಮಾರುತಿರಾಯನ ಆರಾಧನೆಯಿಂದ ಗೆಲುವಿಗೆ ದಾರಿ ದೊರೆಯಲಿದೆ. ಶುಭಸಂಖ್ಯೆ: 7
ಕಟಕ: ಯಾರೋ ಭಯ ಹುಟ್ಟಿಸಿದರು ಎಂದ ಮಾತ್ರಕ್ಕೆ ನಿಮ್ಮ ದಾರಿಯಿಂದ ಹಿಂದಕ್ಕೆ ಹೆಜ್ಜೆಯಿಡಲು ಹೋಗದಿರಿ. ಶುಭಸಂಖ್ಯೆ: 5
ಸಿಂಹ: ಕೋಟ್ಯಂತರ ರೂಪಾಯಿಗಳ ಆಸ್ತಿಯ ವಿಚಾರದಲ್ಲಿ ತುಸು ಎಚ್ಚರಿಕೆಯ ಹೆಜ್ಜೆಗಳನ್ನೇ ಇಡಿ. ಒಳಿತಾಗಲಿದೆ. ಶುಭಸಂಖ್ಯೆ: 1
ಕನ್ಯಾ: ಕಣ್ಣಿನ ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ. ಸೂಕ್ತರಾದ ವೈದ್ಯರ ಸಲಹೆಯನ್ನು ಪಡೆಯಬೇಕು. ಶುಭಸಂಖ್ಯೆ: 6
ತುಲಾ: ನ್ಯಾಯ ಪಡೆಯುವುದಕ್ಕಾಗಿ ಹೆಚ್ಚಿನ ಪ್ರಯತ್ನ, ಓಡಾಟ, ಸೂಕ್ತ ಲೆಕ್ಕಾಚಾರ ಇತ್ಯಾದಿಗಳು ಖಚಿತವಾಗಿರಲಿ. ಶುಭಸಂಖ್ಯೆ: 4
ವೃಶ್ಚಿಕ: ಎಲ್ಲವೂ ಸುಲಭವಾಗಲಿದೆ ಎಂಬಂತಹ ಅತಿಯಾದ ನಂಬಿಕೆಯನ್ನು ಬಿಡಿ. ಬಿರುಗಾಳಿ ಎದುರಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 2
ಧನುಸ್ಸು: ರಿಯಲ್ ಎಸ್ಟೇಟ್ ಬಿಜಿನೆಸ್ನಲ್ಲಿ ಲಾಭ ತರಲು ನಿಮ್ಮ ಲವಲವಿಕೆ, ಉತ್ಸಾಹಗಳು ಸಹಾಯಕವಾಗಲಿವೆ. ಶುಭಸಂಖ್ಯೆ: 5
ಮಕರ: ಕೆಲವು ಕಿಡಿಗೇಡಿಗಳು ನಿಮ್ಮ ವಿರುದ್ಧ ವೃಥಾ ಸುಮ್ಮನೆ ಅಪಪ್ರಚಾರವನ್ನು ಮಾಡಬಹುದು. ಎಚ್ಚರ ಇರಲಿ. ಶುಭಸಂಖ್ಯೆ: 8
ಕುಂಭ: ಅನಿರೀಕ್ಷಿತವಾದ ಧನಲಾಭದಿಂದ ಮಾನಸಿಕ ಸಂತೋಷ ವೃದ್ಧಿಸುವಂತಹ ಉತ್ತಮವಾದ ದಿನವಾಗಿದೆ. ಶುಭಸಂಖ್ಯೆ: 3
ಮೀನ: ಬಿಲ್ವದಳಗಳ ಮೂಲಕ ಶಿವನನ್ನು ಶ್ರದ್ಧೆಯಿಂದ ಆರಾಧಿಸಿ. ನಿಮ್ಮ ಪಾಲಿಗೆ ವಿಶೇಷವಾದ ಸಿದ್ಧಿಯೊಂದು ದೊರೆಯಲಿದೆ. ಶುಭಸಂಖ್ಯೆ:7