More

  ದೇಶದಲ್ಲೇ ಶ್ರೀಮಂತ ಶಾಸಕ ಡಿ.ಕೆ. ಶಿವಕುಮಾರ್​; ಟಾಪ್​ 20ರಲ್ಲಿ 12 ಮಂದಿ ಕರ್ನಾಟಕದವರೇ

  ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ದೇಶದಲ್ಲೇ ಅತಿ ಶ್ರೀಮಂತ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​(ADR) ಹಾಗು ನ್ಯಾಷನಲ್​ ಎಲೆಕ್ಷನ್​ ವಾಚ್​(NEW) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ.

  ದೇಶದ ಟಾಪ್​ 20 ಶ್ರೀಮಂತ ಶಾಸಕರ ಪೈಕಿ ಕರ್ನಾಟಕದ ಒಟ್ಟು 12 ಮಂದಿ ಎಂಎಲ್​ಎಗಳಿರುವುದು ಗಮನಾರ್ಹ ಸಂಗತಿಯಾಗಿದೆ. ಇದಲ್ಲದೆ ಸಿರಿವಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನವನ್ನು ಕರ್ನಾಟಕದ ಎಂಎಲ್​ಎಗಳೇ ಅಲಂಕರಿಸಿರುವುದು ಮತ್ತೊಂದು ವೈಶಿಷ್ಟ್ಯವಾಗಿದೆ.

  ಟಾಪ್​ 12ರಲ್ಲಿ ಕರ್ನಾಟಕದ ಶಾಸಕರು

  ಮೊದಲ ಸ್ಥಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(1,413 ಸಾವಿರ ಕೋಟಿ ರೂ.)​ ಅವರಿದರೆ, ಎರಡನೇ ಸ್ಥಾನದಲ್ಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಪುಟ್ಟಸ್ವಾಮಿಗೌಡ(1,267 ಸಾವಿರ ಕೋಟಿ ರೂ.), ಮೂರನೇ ಸ್ಥಾನದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪ್ರಿಯಾಕೃಷ್ಣ(1,156 ಸಾವಿರ ಕೋಟಿ ರೂ.) ಇದ್ದಾರೆ.

  ಇನ್ನುಳಿದಂತೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್​(643 ಕೋಟಿ ರೂ.), ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್​.ಎ. ಹ್ಯಾರಿಸ್​(439 ಕೋಟಿ ರೂ.), ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಚ್​.ಕೆ. ಸುರೇಶ್​(435 ಕೋಟಿ ರೂ.), ಹಳಿಯಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಆರ್​.ವಿ.ದೇಶಪಾಂಡೆ(363 ಕೋಟಿ ರೂ.), ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಶಾಸಕ ಎಂ.ಆರ್​. ಮಂಜುನಾಥ್​(316 ಕೋಟಿ ರೂ.), ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​​ ಶಾಸಕ ಎಸ್​.ಎನ್​. ಸುಬ್ಬಾರೆಡ್ಡಿ(313 ಕೋಟಿ ರೂ.), ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಶ್ಯಾಮನೂರು ಶಿವಶಂಕರಪ್ಪ(312 ಕೋಟಿ ರೂ.), ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಂ. ಕೃಷ್ಣಪ್ಪ(296 ಕೋಟಿ ರೂ.), ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ(293 ಕೋಟಿ ರೂ.) ಟಾಪ್​ 20ರಲ್ಲಿ ಸ್ಥಾನ ಪಡೆದಿರುವ ಇತರರು.

  Top 20 Rich MLA

  ಇದನ್ನೂ ಓದಿ: ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿ ಜಾತಿ ನಿಂದನೆ; ಶಿವಮೊಗ್ಗದ ಪಾದ್ರಿ ಅರೆಸ್ಟ್​

  ಅತಿ ಬಡವ ಶಾಸಕ ಯಾರು?

  ಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​(ADR) ಹಾಗು ನ್ಯಾಷನಲ್​ ಎಲೆಕ್ಷನ್​ ವಾಚ್​(NEW) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಅತ್ಯಂತ ಬಡ ಶಾಸಕರ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಇಂಡಸ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಿರ್ಮಲ್​ ಕುಮಾರ್​ ಧಾರಾ ಅವರು ಮೊದಲ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯವು 1,700 ರೂಪಾಯಿ ಆಗಿದೆ.

  ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯರವರು ಅತ್ಯಂತ ಬಡ ಶಾಸಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಆಸ್ತಿ ಮೌಲ್ಯವು 30 ಲಕ್ಷ ರೂಪಾಯಿ ಆಗಿದೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯನ್ನು ಆಧರಿಸಿ ಈ ವರದಿಯನ್ನು ತಯಾರು ಮಾಡಲಾಗಿದೆ.

  ದೇಶದಲ್ಲಿ ಒಬ್ಬ ಶಾಸಕನ ಸರಾಸರಿ ಆಸ್ತಿ ಮೌಲ್ಯವು 64.3 ಕೋಟಿ ರೂ ಆಗಿದ್ದು, ದೇಶದಲ್ಲಿ 100 ಕೋಟಿ ರೂ. ಆಸ್ತಿ ಹೊಂದಿರುವ ಶಾಸಕರ ಪೈಕಿ ಕರ್ನಾಟಕದವರೇ ಶೇ. 14ರಷ್ಟು ಇದ್ದಾರೆ ಎಂದು ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾರ್ಮ್ಸ್​(ADR) ಹಾಗು ನ್ಯಾಷನಲ್​ ಎಲೆಕ್ಷನ್​ ವಾಚ್​(NEW) ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts