More

    ಸಿಂಥಿಯಾ ಪಾಕಿಸ್ತಾನದ ಗೌರವ, ಟ್ವಿಟರ್​ನಲ್ಲಿ ಭಾರಿ ಟ್ರೆಂಡಿಂಗ್​

    ಇಸ್ಲಾಮಾಬಾದ್​: ಪಾಕಿಸ್ತಾನದ ಅಧ್ಯಕ್ಷರ ಭವನದಲ್ಲಿದ್ದ ಅಂದಿನ ಗೃಹ ಸಚಿವ ರೆಹಮಾನ್​ ಮಲಿಕ್​ ಅವರ ಅಧಿಕೃತ ನಿವಾಸದಲ್ಲಿ ತಮ್ಮ ಮೇಲೆ ರೆಹಮಾನ್​ ಮಲಿಕ್​ ಅತ್ಯಾಚಾರ ಎಸಗಿದ್ದರು ಎಂಬ ಸಂಗತಿಯನ್ನು ಅಮೆರಿಕದ ಸಾಹಸಿಗ ಮಹಿಳೆ ಸಿಂಥಿಯಾ ಡಿ ರಿಚಿ ಬಹಿರಂಪಡಿಸುತ್ತಲೇ ಸಿಂಥಿಯಾ ಪಾಕಿಸ್ತಾನದ ಗೌರವ (#CynthiaPrideofPakistan)ಎಂಬ ಹ್ಯಾಷ್​ಟ್ಯಾಗ್​ ಟ್ವಿಟರ್​ನಲ್ಲಿ ಭಾರಿ ಟ್ರೆಂಡಿಂಗ್​ಗೆ ಬಂದಿದೆ.

    ಪಾಕ್​ನ ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್​ ಎ ಇನ್ಸಾಫ್​ (ಪಿಟಿಐ) ಪಕ್ಷದ ಸದಸ್ಯರು ಈ ಹ್ಯಾಷ್​ಟ್ಯಾಗ್​ ಅನ್ನು ಆರಂಭಿಸಿದ್ದಾರೆ. ಪ್ರತಿಪಕ್ಷ ಪಿಪಿಪಿ ವಿರುದ್ಧ ಸಿಂಥಿಯಾ ವಾಗ್ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಪಿಟಿಐ ಪಕ್ಷ ಹೇಳಿದೆ.

    ಪಿಎಂಎಲ್​ (ಎನ್​) ನಡುಕ: ಸಿಂಥಿಯಾ ಅವರು ಪಿಪಿಪಿ ಮುಖಂಡರ ವಿರುದ್ಧ ಅತ್ಯಾಚಾರ, ಲೈಂಗಿಕವಾಗಿ ಬಳಸಿಕೊಂಡ ಸಂಗತಿಯನ್ನು ಫೇಸ್​ಬುಕ್​ ಲೈವ್​ನಲ್ಲಿ ಬಹಿರಂಗಪಡಿಸಿದ ಬೆನ್ನಲ್ಲೇ ಪಾಕಿಸ್ತಾನ ಮುಸ್ಲಿಂ ಲೀಗ್​ (ಎನ್​) ಪಕ್ಷದ ಪಾಳೆಯದಲ್ಲೂ ನಡುಕ ಆರಂಭವಾಗಿದೆ. ಪಿಎಂಎಲ್​ (ಎನ್​) ಮುಖಂಡರ ಹುಳುಕುಗಳನ್ನು ಬಹಿರಂಗಪಡಿಸುವುದಾಗಿ ಸಿಂಥಿಯಾ ಹೇಳಿರುವುದು ಇದಕ್ಕೆ ಕಾರಣ.

    ಇದನ್ನೂ ಓದಿ: ಪಾಕ್​ ಅಧ್ಯಕ್ಷರ ಭವನದಲ್ಲಿ ಅಮೆರಿಕದ ಮಹಿಳೆ ಮೇಲೆ ಅತ್ಯಾಚಾರ

    ನನ್ನ ಈಗಿನ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ. ಅನುಕಂಪಭರಿತವಾಗಿದೆ. ನನ್ನ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದ್ದರ ಬಗ್ಗೆ ಇದುವರೆಗೆ ನನ್ನ ಕುಟುಂಬದವರಿಗೂ ಗೊತ್ತಿರಲಿಲ್ಲ. ನಾನು ಸದಾ ಸಕಾರಾತ್ಮಕ ಮನೋಭಾವ ಹೊಂದಿದ್ದು ಪಾಕಿಸ್ತಾನದ ಧನಾತ್ಮಕ ಮುಖವನ್ನು ಮಾತ್ರ ಜಗತ್ತಿಗೆ ತೋರಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಇದೇ ಸಂದರ್ಭದಲ್ಲಿ ನಾನು ಅನೇಕ ರೀತಿಯ ದೌರ್ಜನ್ಯಗಳಿಗೆ ಒಳಗಾಗಿದ್ದೇನೆ. ನಾನು ಒಮ್ಮೆಲೇ ಎಲ್ಲ ಸತ್ಯವನ್ನು ಬಹಿರಂಗಪಡಿಸಲು ಬಯಸುತ್ತೇನೆ. ತನ್ಮೂಲಕ ನಿತ್ಯನರಕ ಅನುಭವಿಸುತ್ತಿರುವ ಪಾಕ್​ನ ಮಹಿಳೆಯರು ತೃತೀಯ ಲಿಂಗಿಗಳು ಮತ್ತು ಸ್ಥಳೀಯರು ಈ ವಿಷಯವಾಗಿ ಏಕಾಂಗಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಸಿಂಥಿಯಾ ಹೇಳಿದ್ದಾರೆ.

    ಪಿಪಿಪಿಯನ್ನು ಅಪರಾಧಿ ಸ್ಥಳದಲ್ಲಿ ನಿಲ್ಲಿಸುವ ಉದ್ದೇಶ ನನ್ನದಲ್ಲ. ಬದಲಿಗೆ ಇನ್ನೂ ಹಲವು ಪಕ್ಷಗಳ ಮುಖಂಡರು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ದೈಹಿಕವಾಗಿ ದೌರ್ಜನ್ಯಗಳನ್ನು ಎಸಗಿದ್ದಾರೆ. ಇನ್ನೆರಡು ಪ್ರಕರಣಗಳಲ್ಲಿ ನಾನು ಇನ್ನೂ ಪಾಕಿಸ್ತಾನದ ಪರ ಲಾಬಿಗಾರರು ಅಥವಾ ಪಿಪಿಪಿಯ ಎರಡನೇ ಹಂತದ ನಾಯಕರ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ ಎಂದು ತಿಳಿಸಿದ್ದಾರೆ.

    ಸಿಂಥಿಯಾಗೆ ಪಾಕ್​ ರಾಜಕೀಯ ರಂಗ ಪ್ರವೇಶ ದೊರೆತದ್ದು ಹೇಗೆ? ಸಿಂಥಿಯಾ 2009ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪಾಕ್​ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಟೆಕ್ಸಾಸ್​ನಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬರು ಇವರನ್ನು ಆಗಿನ ಆರೋಗ್ಯ ಸಚಿವ ಮಕ್ದೂಮ್​ ಶಹಾಬುದ್ದೀನ್​ ಅವರಿಗೆ ಪರಿಚಯಿಸಿದ್ದರು. ಕೊನೆಗೆ ಇವರು ಗೃಹ ಸಚಿವರಾಗಿದ್ದ ರೆಹಮಾನ್​ ಮಲಿಕ್​ ಅವರಿಗೆ ಸಹಾಯಕರಾಗಿ ನೇಮಕಗೊಂಡಿದ್ದರು.

    ಈ ರೀತಿಯಾಗಿ ರಾಜಕೀಯ ರಂಗದ ಸಂಪರ್ಕ ಪಡೆದುಕೊಂಡ ಅವರು, ಹಂತ ಹಂತವಾಗಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋದರು. ಪಾಕಿಸ್ತಾನ ಸರ್ಕಾರಗಳಲ್ಲಿ ಅವರು ಯಾವ ಹುದ್ದೆಯಲ್ಲಿ ಕೆಲಸ ಮಾಡಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸಂವಹನ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಸಿಂಥಿಯಾ ಪಾಕಿಸ್ತಾನದ ಗೌರವ, ಟ್ವಿಟರ್​ನಲ್ಲಿ ಭಾರಿ ಟ್ರೆಂಡಿಂಗ್​

    ಕೆಲ ಚಲನಚಿತ್ರಗಳನ್ನು ನಿರ್ಮಿಸಿದ್ದ ಆಕೆ ವಿಶ್ವಬ್ಯಾಂಕ್​ನ ಮಾನ್ಯತೆ ಹೊಂದಿದ್ದ ಎನ್​ಜಿಒವೊಂದರಲ್ಲೂ ಕೆಲಸ ಮಾಡಿದ್ದರು. ಇವರು ವಿದೇಶಿ ಬೇಹುಗಾರ ಇರಬಹುದು ಎಂಬ ಅನುಮಾನ ಮೂಡಿದ್ದರಿಂದ, ಪಾಕ್​ನ ಬಹುತೇಕ ಸಚಿವರು ಇವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು ಎನ್ನಲಾಗಿದೆ.

    ಪಾಕಿಸ್ತಾನದಲ್ಲಿ ಸರ್ಕಾರಗಳು ಬದಲಾಗುತ್ತಿರುವಂತೆ ಇವರು ಪುಟಿದೇಳುತ್ತಿದ್ದರು. ನವಾಜ್​ ಶರೀಫ್​ ಸರ್ಕಾರ ಇದ್ದಾಗ ಇವರು ಭಾರಿ ಪ್ರಭಾವಶಾಲಿಯಾಗಿದ್ದರು ಹಾಗೂ ಇವರ ಜನಪ್ರಿಯತೆ ಉತ್ತುಂಗ ತಲುಪಿತ್ತು ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ಪಾಕಿಸ್ತಾನ ಮತ್ತು ಅದರ ಮಿಲಿಟರಿಯನ್ನು ಸದಾ ಸಮರ್ಥಿಸಿಕೊಳ್ಳುತ್ತಿರುತ್ತಾರೆ.

    ಸಿಂಥಿಯಾ ಸಾಮಾನ್ಯವಾಗಿ ಪ್ರತಿಬಾರಿಯೂ ಪಾಕ್​ನ ಪ್ರತಿಪಕ್ಷಗಳ ವಿರುದ್ಧ ಅನೇಕ ಆರೋಪಗಳನ್ನು ಮಾಡುವ ಜತೆಗೆ ಆರೋಪಗಳನ್ನು ಸಮರ್ಥಿಸಿಕೊಳ್ಳುವ, ಸಾಮಾನ್ಯ ಜನರಿಗೆ ಪಡೆಯಲು ಅಸಾಧ್ಯವೆನಿಸಿದ ದಾಖಲೆ ಸಮೇತ ಸಾಕ್ಷ್ಯಗಳನ್ನು ಒದಗಿಸುತ್ತಾರೆ. ಕಳೆದೆರಡು ವಾರಗಳಿಂದ ಅಂತೂ ಪ್ರಮುಖ ಪ್ರತಿಪಕ್ಷ ಪಿಪಿಪಿಯ ರಾಷ್ಟ್ರೀಯ ಮತ್ತು ಪ್ರಾದೇಶಿಕ ಮುಖಂಡರ ವಿರುದ್ಧ ಭ್ರಷ್ಟಾಚಾರ ಮತ್ತು ಅನೈತಿಕ ಕೃತ್ಯಗಳನ್ನು ನಿರಂತರವಾಗಿ ಬಹಿರಂಗಪಡಿಸುತ್ತಿದ್ದಾರೆ.

    ಪಾಕಿಸ್ತಾನದಲ್ಲಿ ಅವಿತಿರುವ ಭೂಗತ ಕ್ರಿಮಿ ದಾವೂದ್​ ಇಬ್ರಾಹಿಂ ಕೋವಿಡ್​ಗೆ ಬಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts