More

    ಮಡಿಕೇರಿಯಲ್ಲಿ ಸಿಲಿಂಡರ್​ ಸ್ಪೋಟ: ಮೂರು ಮನೆಗಳು ಬೆಂಕಿಗೆ ಆಹುತಿ

    ಮಡಿಕೇರಿ: ತಾಲೂಕಿನ ಮೂರ್ನಾಡಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಮೂರು ಮನೆಗಳು ಬೆಂಕಿಗೆ ಆಹುತಿಯಾದ ದುರ್ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

    ಮಂದಣ್ಣ ಎಂಬುವರಿಗೆ ಸೇರಿದ ಲೈನ್ ಮನೆಯಲ್ಲಿ ಕಾಫಿ ತೋಟದ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಕಾರ್ಮಿಕರಾದ ಸೋಮಯ್ಯ, ವಿಜಯ ಮತ್ತು ರಶ್ಮಿ ಎಂಬುವರು ಲೈನ್ ಮನೆಯಲ್ಲಿ ವಾಸಿಸುತ್ತಿದ್ದರು. ಅಡುಗೆಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮೂರು ಮನೆ ಜಖಂಗೊಂಡಿದೆ. ಮನೆಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಸಾಮಗ್ರಿ ಸುಟ್ಟು ಭಸ್ಮವಾಗಿದೆ.

    ಮಡಿಕೇರಿಯಲ್ಲಿ ಸಿಲಿಂಡರ್​ ಸ್ಪೋಟ: ಮೂರು ಮನೆಗಳು ಬೆಂಕಿಗೆ ಆಹುತಿಸಿಲಿಂಡರ್​ ಸ್ಫೋಟದ ವೇಳೆ ಕೂಲಿ ಕಾರ್ಮಿಕರು ಕಾಫಿತೋಟಕ್ಕೆ ಹೋಗಿದ್ದರು. ಹಾಗಾಗಿ ಪ್ರಾಣ ಅಪಾಯ ಸಂಭವಿಸಿಲ್ಲ. ಆದರೆ ಕೂಲಿ ಕಾರ್ಮಿಕರು ಸಣ್ಣ ಫೈನಾನ್ಸ್​ಗಳಲ್ಲಿ ಸಾಲ ಮಾಡಿ ಅಗತ್ಯ ವಸ್ತುಗಳನ್ನು ಖರೀದಿಸಿಟ್ಟಿದ್ದರು. ಇವುಗಳ ಜತೆಗೆ ಮಕ್ಕಳ ಪುಸ್ತಕವೂ ಸುಟ್ಟು ಭಸ್ಮವಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನೀರಿಗಾಗಿ ಕೂಡಲಸಂಗಮದಿಂದ ರಾಜಭವನಕ್ಕೆ ರೈತರ ಪಾದಯಾತ್ರೆ: ವೈಎಸ್​ವಿ ದತ್ತಾ ಘೋಷಣೆ

    ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

    ನಮ್ಮತ್ರ ಹಣವಿಲ್ಲ, ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ: ದೇವೇಗೌಡ

    ಭಾವಿ ಪತಿಗೆ ಮಲಗಲು ತನ್ನ ಮನೆಯಲ್ಲೇ ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts