More

    8 ದಿನಗಳ ಕಾಲ ಸೈಕಲ್​ ಓಡಿಸಿ ತಂದೆಯನ್ನು ಊರಿಗೆ ಕರೆದುಕೊಂಡುಬಂದಿದ್ದ ಬಾಲಕಿಯ ತಂದೆ ಹೃದಯಾಘಾತಕ್ಕೆ ಸಾವು!

    ಪಟನಾ: ಕಳೆದ ವರ್ಷದ ಲಾಕ್​ಡೌನ್​ ಅನ್ನು ಯಾರೂ ಮರೆತಿಲ್ಲ. ಆ ಸಮಯದಲ್ಲಿ ಬಾಲಕಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಗುರುಗ್ರಾಮದಿಂದ ಬಿಹಾರದ ದರ್ಬಾಂಗ್​ ಜಿಲ್ಲೆಗೆ ಸೈಕಲ್​ನಲ್ಲೇ ಕರೆದುಕೊಂಡು ಹೋಗಿದ್ದು ನಿಮಗೆಲ್ಲರಿಗೂ ನೆನಪಿರಬಹುದು. ಇದೀಗ ಆಕೆಯ ತಂದೆ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

    13 ವರ್ಷದ ಬಾಲಕಿ ಜ್ಯೋತಿ ಪಾಸ್ವಾನ್​ ಇದೀಗ ತಂದೆ ಮೋಹನ್​ ಪಾಸ್ವಾನ್​ನನ್ನು ಕಳೆದುಕೊಂಡಿದ್ದಾಳೆ. ಮೋಹನ್​ನ ಸಂಬಂಧಿಯೊಬ್ಬರು ಇತ್ತೀಚೆಗೆ ಮೃತರಾಗಿದ್ದರಂತೆ. ಅವರ ತಿಥಿ ಮಾಡುವ ಸಲುವಾಗಿ ಕುಟುಂಬಸ್ಥರು ಸೇರಿ ಚರ್ಚೆ ನಡೆಸುತ್ತಿದ್ದರು. ಚರ್ಚೆ ಮುಗಿಯುತ್ತಿದ್ದಂತೆ ಮೋಹನ್​ ಕುಸಿದು ಬಿದ್ದಿದ್ದಾನೆ. ಹೃದಯಾಘಾತವಾಗಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

    ಮೋಹನ್​ ಪಾಸ್ವಾನ್​ ಗುರುಗ್ರಾಮದಲ್ಲಿ ಆಟೋ ಓಡಿಸಿಕೊಂಡು ಬದುಕುತ್ತಿದ್ದ. ಆತನ ಕುಟುಂಬ ಪೂರ್ತಿ ಬಿಹಾರದ ದರ್ಬಾಂಗ್​ ಜಿಲ್ಲೆಯ ಸಿರ್ತುಲ್ಲಿ ಗ್ರಾಮದಲ್ಲಿ ನೆಲೆಸಿತ್ತು. ಕಳೆದ ವರ್ಷ ಜನವರಿಯಲ್ಲಿ ಮೋಹನ್​ಗೆ ಅಪಘಾತವಾಗಿದ್ದರಿಂದಾಗಿ ಆತನನ್ನು ನೋಡಿಕೊಳ್ಳಲೆಂದು ಮಗಳು ಜ್ಯೋತಿ ಗುರುಗ್ರಾಮಕ್ಕೆ ತೆರಳಿದ್ದಳು. ಇದ್ದ ಒಂದು ಆಟೋವನ್ನೂ ಅದರ ಮಾಲೀಕ ತೆಗೆದುಕೊಂಡು ಹೋಗಿದ್ದನಂತೆ. ಅದೇ ಸಮಯಕ್ಕೆ ಸರಿಯಾಗಿ ಲಾಕ್​ಡೌನ್​ ಘೋಷಿಸಲಾಯಿತು. ಕೆಲಸವೂ ಇಲ್ಲದೆ ಗುರುಗ್ರಾಮದಲ್ಲಿ ಜೀವಿಸುವುದು ಕಷ್ಟವೆಂದು ಅರಿತ ಜ್ಯೋತಿ 400 ರೂಪಾಯಿಗೆ ಸೈಕಲ್​ ಒಂದನ್ನು ಖರೀದಿಸಿ ಅದರಲ್ಲಿ ತಂದೆಯನ್ನು ಕೂರಿಸಿಕೊಂಡು ಊರಿನ ಕಡೆ ಮುಖ ಮಾಡಿದ್ದಳು. ಬರೋಬ್ಬರಿ 8 ದಿನಗಳ ನಂತರ ಅವರು ಮನೆ ಸೇರಿದ್ದರು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. (ಏಜೆನ್ಸೀಸ್)

    ಸೆಂಟ್ರಲ್ ವಿಸ್ತಾ ಅವೆನ್ಯೂ ​​ನಿರ್ಮಾಣ ಕಾರ್ಯಕ್ಕೆ ತಡೆ ಇಲ್ಲ : ದೆಹಲಿ ಹೈಕೋರ್ಟ್

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts