More

    ಗೆಳತಿ ಮಾಡಿದ ಎಡವಟ್ಟು, ಬ್ಯಾಂಕ್​ ಮ್ಯಾನೇಜರ್​ ಕ್ರೆಡಿಟ್​ಕಾರ್ಡ್​ಗೆ ಬಿತ್ತು ಕನ್ನ; ಹಾಗಾದರೆ ಗೆಳತಿ ಮಾಡಿದ್ದಾದರೂ ಏನು?

    ಬಳ್ಳಾರಿ: ಪರಿಚಿತರೇ ಇರಲಿ, ಮಕ್ಕಳೇ ಇರಲಿ. ಬ್ರೌಸ್ಸಿಂಗ್​ ಮಾಡಲು ಸ್ಮಾರ್ಟ್​ಫೋನ್​ ಕೊಡುವ ಮುನ್ನ ಸಾವಿರ ಬಾರಿ ಯೋಚಿಸಿ. ಬ್ಯಾಂಕ್​ ಮ್ಯಾನೇಜರ್​ ಒಬ್ಬರು ತಮ್ಮ ಸ್ಮಾರ್ಟ್​ಫೋನ್​ ಅನ್ನು ಬ್ರೌಸ್​ ಮಾಡಲು ಗೆಳತಿಗೆ ಕೊಟ್ಟು 50 ಸಾವಿರ ರೂ. ಕಳೆದುಕೊಂಡಿದ್ದಾರೆ.

    ಬ್ಯಾಂಕ್​ ಮ್ಯಾನೇಜರ್​ ವಾಣಿ ಅವರ ಮನೆಗೆ ಬಂದಿದ್ದ ಗೆಳತಿ, ವಾಣಿ ಅವರ ಸ್ಮಾರ್ಟ್​ಫೋನ್​ ಬಳಸಿ ಉದ್ಯೋಗ ಹುಡುಕಲು ಮುಂದಾಗಿದ್ದರು. ಆಗ ಶೈನ್​ಡಾಟ್​ ಕಾಂನಿಂದ ಉದ್ಯೋಗ ಲಭ್ಯತೆಯ ಲಿಂಕ್​ ದೊರೆತಿತ್ತು. ಆ ಲಿಂಕ್​ ತೆರೆದ ಬಳಿಕ ಕೋಮಲ್​ ಎಂಬಾಕೆ ಕರೆ ಮಾಡಿ, ಅವರ ವೈಯಕ್ತಿಕ ವಿವರಗಳನ್ನು ಕೇಳಿ ತಿಳಿದುಕೊಂಡಿದ್ದಳು.

    ನಿಮಗೆ ನಮ್ಮ ಕಂಪನಿಯಲ್ಲಿ ಕೆಲಸ ಸಿಗಲಿದೆ. ರೆಸ್ಯೂಮ್ ತುಂಬಿ ಲಿಂಕ್‌ನಲ್ಲಿ ಹಾಕಿ. ಆನ್‌ಲೈನ್ ಮೂಲಕವೇ ಇಂಟರ್‌ವ್ಯೆ ಮಾಡಲಾಗುವುದು ಎಂದು ಆಕೆ ಹೇಳಿದ್ದಳು.

    ಅದರಂತೆ ರೆಸ್ಯೂಮ್​ ತುಂಬಿ ಲಿಂಕ್​ನಲ್ಲಿ ಅಪ್​ಡೇಟ್​ ಮಾಡುವಾಗ ಕ್ರೆಡಿಟ್​ಕಾರ್ಡ್​ ಮಾಹಿತಿಯನ್ನೂ ಕೇಳಲಾಗಿತ್ತು. ತಮ್ಮ ಬಳಿ ಕ್ರೆಡಿಟ್​ಕಾರ್ಡ್​ ಇಲ್ಲದ ಕಾರಣ ಗೆಳತಿ ವಾಣಿ ಅವರ ಕ್ರೆಡಿಟ್​ಕಾರ್ಡ್​ ವಿವರಗಳನ್ನು ಒದಗಿಸಿದ್ದರು.

    ಆರಂಭದಲ್ಲಿ ಕ್ರೆಡಿಟ್​ಕಾರ್ಡ್​ನಿಂದ 49 ರೂ. ಕಟ್​ ಆಗಿದ್ದು, ಒಂದು ಗಂಟೆಯ ಬಳಿಕ ತಲಾ 10 ಸಾವಿರ ರೂ.ನಂತೆ 5 ಬಾರಿ ಕಾರ್ಡ್​ ಸ್ವೈಪ್​ ಆಗಿದೆ. ಇದರಿಂದ ವಂಚನೆಗೆ ಒಳಗಾಗಿರುವುದು ಗೊತ್ತಾಗಿ, ಸೈಬರ್​ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ

    https://www.vijayavani.net/coronavirus-india-may-month-pandemic-infection/.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts